CINE | ಕಂಗನಾ ಸಿನಿಮಾಗೆ ಸೆನ್ಸಾರ್‌ ಪ್ರಮಾಣಪತ್ರವೇ ಇಲ್ಲ, ಕೋರ್ಟ್‌ಗೆ ಹೋಗ್ತೀನಿ ಎಂದ ನಟಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಕಂಗನಾ ರಣಾವತ್ ಅವರು ಮುಂಬರುವ ‘ಎಮರ್ಜೆನ್ಸಿ’ ಚಿತ್ರದ ಪ್ರಚಾರದಲ್ಲಿ ಭಾಗಿ ಆಗಿದ್ದಾರೆ. ಈಗ ಅವರು ಸೆನ್ಸಾರ್ ಮಂಡಳಿಯ ವಿರುದ್ಧ ಸಿಡಿದೆದ್ದಿದ್ದಾರೆ. ಸೆನ್ಸಾರ್ ಮಂಡಳಿಯವರು ನಮಗೆ ಪ್ರಮಾಣಪತ್ರ ನೀಡುತ್ತಿಲ್ಲ ಎನ್ನುವ ಆರೋಪವನ್ನು ಅವರು ಮಾಡಿದ್ದಾರೆ. ಸಿನಿಮಾದಲ್ಲಿ ತುಂಬಾನೇ ಡ್ರಾಮಾ ಇದೆ ಎಂದು ಸೆನ್ಸಾರ್ ಮಂಡಳಿಯವರು ಹೇಳುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

‘ಆರಂಭದಲ್ಲಿ ಸಿನಿಮಾ ನೋಡಿದ ಸೆನ್ಸಾರ್ ಮಂಡಳಿಯವರು ಪ್ರಮಾಣ ಪತ್ರ ನೀಡಲು ಒಪ್ಪಿದ್ದರು. ಆದರೆ, ಈಗ ಅವರು ಪ್ರಮಾಣಪತ್ರ ನೀಡಲು ನಿರಾಕರಿಸುತ್ತಿದ್ದಾರೆ. ಒತ್ತಡಗಳಿಂದ ಅವರು ಈ ರೀತಿ ಮಾಡುತ್ತಿರಬಹುದು. ಸಿನಿಮಾ ರಿಲೀಸ್ ಮಾಡಲು ನಾನು ಕೋರ್ಟ್​ಗೆ ಹೋಗಲು ಸಿದ್ಧ’ ಎಂದು ಅವರು ಹೇಳಿದ್ದಾರೆ.

ಸಿನಿಮಾ ಮೇಲೆ ಬ್ಯಾನ್ ಹೇರಲು ಕೆಲ ರಾಜ್ಯಗಳು ಮುಂದಾಗಿವೆ. ಈಗಾಗಲೇ ತೆಲಂಗಾಣ ಸರ್ಕಾರ ಈ ಬಗ್ಗೆ ಆಲೋಚನೆ ಮಾಡಿದೆ ಎನ್ನಲಾಗಿದೆ. ಸಿಖ್ ಸಮುದಾಯವನ್ನು ಸಿನಿಮಾದಲ್ಲಿ ಕೆಟ್ಟದಾಗಿ ತೋರಿಸಲಾಗಿದೆ ಎಂಬುದು ಆ ಸಮುದಾಯವರ ಆರೋಪ. ಒಂದೊಮ್ಮೆ ಸೆನ್ಸಾರ್ ಮಂಡಳಿಯವರು ಪ್ರಮಾಣಪತ್ರ ನೀಡದೇ ಇದ್ದರೆ ಸಿನಿಮಾ ರಿಲೀಸ್ ಆಗುವುದಿಲ್ಲ.

 

- Advertisement - Skool Shine Skool Shine

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!