ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಂಗ್ರೆಸ್ ಫೇಮಸ್ ಐದು ಗ್ಯಾರೆಂಟಿಗಳನ್ನು ಜನ ತುಂಬಾನೇ ನಂಬಿದ್ದಾರೆ. ಈ ಗ್ಯಾರೆಂಟಿಗಳು ಯಾವಾಗ ಜಾರಿಗೆ ಬರುತ್ತವೋ ಎಂದು ಕಾದು ಕುಳಿತಿದ್ದಾರೆ. ಈ ಬಗ್ಗೆ ನೂತನ ಸಚಿವ ಸತೀಶ್ ಜಾರಕಿಹೊಳಿ ಮಾತನಾಡಿದ್ದು, ಎಲ್ಲಾರ್ಗೂ ಗ್ಯಾರೆಂಟಿ ಕೊಡೋದಿಲ್ಲ ಎಂದು ಹೇಳಿದ್ದಾರೆ.
ಮನೆಮನೆಗೆ ಗ್ಯಾರೆಂಟಿ ಕಾರ್ಡ್ ಎಸೆದ ಹಾಗೆ ಮನೆ ಮನೆಗೂ ಎಲ್ಲಾ ಗ್ಯಾರೆಂಟಿ ಕೊಡೋಕಾಗೋದಿಲ್ಲ, ಬಡವರಿಗೆ ನಿರ್ಗತಿಕರಿಗೆ, ಇಲ್ಲದವರಿಗೆ ಯೋಜನೆ ತಲುಪಿಸುತ್ತೇವೆ ಎಂದಿದ್ದಾರೆ.
ನಮ್ಮ ಸರ್ಕಾರದ ಮೇಲೆ ಸಾಕಷ್ಟು ನಿರೀಕ್ಷೆ ಇದೆ ಎಂದು ತಿಳಿದಿದೆ. ನಿಮ್ಮ ಭರವಸೆ ಸುಳ್ಳಾಗೋದಿಲ್ಲ. ಗ್ಯಾರೆಂಟಿ ಈಡೇರುತ್ತದೆ. ಬೇರೆ ಪಕ್ಷಗಳ ಮಾತಿನ ಬಗ್ಗೆ ಅನಾವಶ್ಯಕ ತಲೆ ಕೆಡಿಸಿಕೊಳ್ಳಬೇಡಿ ಎಂದಿದ್ದಾರೆ.