ಹೊಸದಿಗಂತ ಡಿಜಿಟಲ್ ಡೆಸ್ಕ್:
ಅನೇಕ ಸಿನಿಮಾಗಳಲ್ಲಿ ಲಾಜಿಕ್ ಇಲ್ಲ ಎಂದು ಪ್ರೇಕ್ಷಕರು ಮೂಗು ಮುರಿಯುತ್ತಾರೆ. ಆದರೆ ಎಷ್ಟೇ ಸೂಪರ್ ಹಿಟ್ ಸಿನಿಮಾಗಳಲ್ಲಿ ಲಾಜಿಕ್ ಇರುವುದೇ ಇಲ್ಲ.
ಆ ಕುರಿತು ಕರಣ್ ಜೋಹರ್ ಅವರು ತಮ್ಮ ಅನಿಸಿಕೆ ತಿಳಿಸಿದ್ದಾರೆ. ಪ್ರೇಕ್ಷಕರ ನಂಬಿಕೆ ಬಲವಾಗಿದ್ದಾಗ ಲಾಜಿಕ್ನ ಪ್ರಶ್ನೆ ಎದುರಾಗುವುದಿಲ್ಲ ಎಂಬುದು ಕರಣ್ ಜೋಹರ್ ಅವರ ವಾದ. ಈ ಮಾತಿಗೆ ಅವರು ಕೆಲವು ಸಿನಿಮಾಗಳನ್ನು ಉದಾಹರಣೆಯಾಗಿ ನೀಡಿದ್ದಾರೆ.
ನಂಬಿಕೆ ಎಂಬುದು ಬಹಳ ಮುಖ್ಯ. ದೊಡ್ಡ ನಿರ್ದೇಶಕರ ಸಿನಿಮಾಗಳನ್ನೇ ಉದಾಹರಣೆಯಾಗಿ ತೆಗೆದುಕೊಳ್ಳಿ. ದೊಡ್ಡ ಸಿನಿಮಾಗಳು ಯಶಸ್ಸು ಕಂಡಿರುವುದೇ ನಂಬಿಕೆ ಮೇಲೆ. ಸಿನಿಮಾದಲ್ಲಿ ಲಾಜಿಕ್ ಎಂಬುದು ಮುಖ್ಯವಾಗಲ್ಲ. ರಾಜಮೌಳಿ ಮಾಡಿದ ಯಾವುದೇ ಸಿನಿಮಾವನ್ನು ಉದಾಹರಣೆಯಾಗಿ ಹೇಳಬಹುದು. ಅವುಗಳಲ್ಲಿ ಲಾಜಿಕ್ ಏನಿದೆ? ಅಲ್ಲಿ ನಂಬಿಕೆಯೇ ಮುನ್ನೆಲೆಗೆ ಬರುತ್ತದೆ’ ಎಂದಿದ್ದಾರೆ ಕರಣ್ ಜೋಹರ್.
ಅನಿಮಲ್, ಆರ್ಆರ್ಆರ್, ಗದರ್ ಸಿನಿಮಾಗಳಲ್ಲಿ ಲಾಜಿಕ್ ಇಲ್ಲ. ಒಬ್ಬ ವ್ಯಕ್ತಿ ಸಾವಿರ ಜನರಿಗೆ ಹೊಡೆಯುತ್ತಾನೆ ಎಂದರೆ ಅದು ನಂಬಿಕೆ ಅಷ್ಟೇ. ಸನ್ನಿ ಡಿಯೋಲ್ ಅದನ್ನು ಮಾಡುತ್ತಾರೆ ಎಂಬುದು ಗದರ್ ಸಿನಿಮಾದ ನಿರ್ದೇಶಕ ಅನಿಲ್ ಶರ್ಮ ಅವರ ನಂಬಿಕೆ. ನಿಮ್ಮ ಮೇಲೆ ನಿಮಗೆ ನಂಬಿಕೆ ಇಲ್ಲದಿದ್ದರೆ, ಪ್ರೇಕ್ಷಕರನ್ನು ನೀವು ಅನುಮಾನಿಸಿದರೆ, ಲಾಜಿಕ್ ಬಗ್ಗೆ ತುಂಬ ಗಮನ ಹರಿಸಿದರೆ ಸಮಸ್ಯೆ ಆರಂಭ ಆಗುತ್ತದೆ’ ಎಂದು ಕರಣ್ ಜೋಹರ್ ಅವರು ಹೇಳಿದ್ದಾರೆ.