ಹೊಸದಿಗಂತ ಡಿಜಿಟಲ್ ಡೆಸ್ಕ್:
ಯಾವುದೇ ಮನೆಗೆ ಬಾಡಿಗೆಗೆ ಹೋಗುವಾಗ, ಸೈಟ್ ಕೊಳ್ಳುವಾಗ ಅಥವಾ ಮನೆ ಖರೀದಿ ಮಾಡುವಾಗ ಆ ಮನೆಯಲ್ಲಿ ಏನಾದ್ರೂ ಸಮಸ್ಯೆ ಇದೆಯಾ ನೋಡಿ ನಂತರ ಮುಂದುವರಿಯಬೇಕು ಎಂದು ತಿಳಿದವರು ಹೇಳ್ತಾರೆ.
ಕೆಲವರು ಇದನ್ನು ನಂಬಿದ್ರೂ ಕೆಲವರಿಗೆ ಇವುಗಳ ಬಗ್ಗೆ ನಂಬಿಕೆ ಇಲ್ಲ. ಇದೀಗ ದೋಷ, ನೆಮ್ಮದಿ ಎಲ್ಲವನ್ನೂ ದೃಢವಾಗಿ ನಂಬುವ ಪ್ರಿಯಾಂಕ ಚೋಪ್ರಾ ಹಾಗೂ ನಿಕ್ ಜೋನಸ್ ತಮ್ಮ ಕನಸಿನ ಮನೆಯನ್ನೇ ತೊರೆದಿದ್ದಾರೆ.
ಸುಮಾರು 166 ಕೋಟಿ ರೂಪಾಯಿ ಬೆಲೆಯ ಮನೆ ಇದಾಗಿದ್ದು, ಬೇರೆ ಮನೆ ಖರೀದಿ ಬಗ್ಗೆ ನಿಕ್ ದಂಪತಿ ಆಲೋಚಿಸಿದ್ದಾರಂತೆ. ಈ ಮನೆ ಖರೀದಿ ಮಾಡಿದಾಗಿನಿಂದಲೂ ಕಷ್ಟಗಳು ಬರುತ್ತಲೇ ಇದೆ ಎನೆನಲಾಗಿದೆ.
ಮಾನಸಿಕ ಸಮಸ್ಯೆಗಳ ಜೊತೆ ಮನೆಯಲ್ಲಿ ಅಲ್ಲಲ್ಲಿ ಲೀಕೇಜ್ ಸಮಸ್ಯೆಯಿಂದ ಪಾಚಿ ಕಟ್ಟಿ ಮನೆಯಿಡೀ ವಾಸನೆ ಬರುತ್ತಿದೆ. ಇದರಿಂದ ಆರೋಗ್ಯಕ್ಕೂ ತೊಂದರೆಯಾಗುತ್ತಿದೆ ಎಂದು ನಿಕ್ ದಂಪತಿ ಮನೆ ಮಾರಿದವರಿಗೆ ದೂರಿದ್ದಾರೆ ಎನ್ನಲಾಗಿದೆ.