ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಗಂಡಸ್ತನ ಪದ ಬಳಸಿದ್ದಕ್ಕೆ ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿಯವರು ಕ್ಷಮೆ ಕೇಳಿದ್ದಾರೆ.
ವಿಹೆಚ್‌ಪಿ, ಬಜರಂಗದಳದವರು ಸಮಾಜ ಘಾತುಕರು, ಸಿಎಂ ಬೊಮ್ಮಾಯಿಗೆ ಗಂಡಸ್ತನ ಇದ್ದಾರೆ ಕೂಡಲೇ ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಹೆಚ್‌ಡಿ ಕುಮಾರಸ್ವಾಮಿ ಹೇಳಿದ್ದರು. ಈ ಹೇಳಿಕೆಗೆ ತ್ರೀವ ಆಕ್ಷೇಪ ವ್ಯಕ್ತವಾಗಿದ್ದು, ಕುಮಾರಸ್ವಾಮಿಯವರುವಿರುದ್ಧ ಅಡಳಿತ ಪಕ್ಷದ ನಾಯಕರುಗಳು ಮುಗಿ ಬೀಳತೊಡಗಿದರು.
ಇದೀಗ ಹೆಚ್‌ಡಿಕೆ ಪ್ರತಿಕ್ರಿಯೆ ನೀಡಿದ್ದು, ಮಾತನಾಡುವ ಭರದಲ್ಲಿ ಗಂಡಸ್ತದ ಬಗ್ಗೆ ಹೇಳಿದ್ದೇನೆ. ನನ್ನ ಪದಬಳಕೆಯಿಂದ ನೋವಾಗಿದ್ರೆ ಸಾರ್ವಜನಿಕವಾಗಿ ವಿಷಾದ ವ್ಯಕ್ತಪಡಿಸುತ್ತೇನೆ ಅಂತ ಹೇಳಿದ್ದಾರೆ.
ಇದೇ ವೇಳೆ ಅವರು ರಾಜ್ಯ ಸರ್ಕಾರಕ್ಕೆ ಒಂದು ತಿಂಗಳ ಸಮಯ ನೀಡುತ್ತೇನೆ, ವಿವಾದ ಬಗೆಹರಿಸಿ ಅಂತ ಸವಾಲು ಹಾಕಿದ್ದಾರೆ.