August 24, 2026
Monday, August 24, 2026
spot_img

ದಿನಭವಿಷ್ಯ: ಇತರರ ಮಾತಿನಿಂದ ಉಪಯೋಗ ಇಲ್ಲ, ನಿಮ್ಮ ಏಳಿಗೆಯ ಹೆಜ್ಜೆ ನೀವೇ ಇಡಬೇಕು

ಮೇಷ
ಹೆಚ್ಚು ಚಟುವಟಿಕೆ ಕಾಣದ ದಿನ. ಯೋಚಿಸಿ ಕಾರ್ಯ ಎಸಗಿ. ಸಂಗಾತಿ ಯಿಂದ ಅಚ್ಚರಿಯ ನಡೆ. ಒತ್ತಡದಿಂದ ತಲೆಬೇನೆ ಕಾಣಿಸಿಕೊಳ್ಳಬಹುದು.  
ವೃಷಭ
ನಿಮ್ಮ ಏಳಿಗೆಗೆ ತಕ್ಕುದಾದ ಹೆಜ್ಜೆ ಇಡಿ. ಇತರರ ಮಾತು ಕೇಳಿ ವರ್ತಿಸಬೇಡಿ. ಆರೋಗ್ಯ ಸ್ಥಿರ. ಪ್ರಮುಖ ಸಮಸ್ಯೆ ನಿವಾರಣೆ. ನಿರಾಳತೆ.  
ಮಿಥುನ
ಯಾವುದೇ ಕ್ರಮ ತೆಗೆದುಕೊಳ್ಳುವ ಮುನ್ನ ಸರಿಯಾಗಿ ಯೋಚಿಸಿ. ದಂಪತಿ ಮಧ್ಯೆ ವಾಗ್ವಾದ. ಮನೆ ಖರೀದಿ ಯೋಜನೆ ಸಫಲವಾಗುವ ಸಾಧ್ಯತೆ.        
ಕಟಕ
ವೃತ್ತಿಯಲ್ಲಿ ಎಲ್ಲ ಕಾರ್ಯ ಸುಗಮ. ನಿಮ್ಮ ನಿರ್ಧಾರ ಎಲ್ಲರ ಏಳಿಗೆಗೆ ಕಾರಣವಾಗಲಿದೆ. ಮೇಲಽಕಾರಿಯಿಂದ ಶ್ಲಾಘನೆ, ಆರ್ಥಿಕ ಉನ್ನತಿ.            
ಸಿಂಹ
ಅಪೇಕ್ಷಿತ ಗುರಿ ಈಡೇರಿಕೆ. ಆತ್ಮವಿಶ್ವಾಸ ವೃದ್ಧಿ. ಪಾಲುದಾರಿಕೆಯ ಅವಕಾಶ. ಪ್ರವಾಸ ಸಂಭವ. ಹಣ ಗಳಿಕೆಯ ಉದ್ದೇಶ ಸಾಕಾರ.  
ಕನ್ಯಾ
 ನಿರಾಶೆಯ ದಿನ.  ಪರಿಶ್ರಮ ವ್ಯರ್ಥ. ದೈಹಿಕ  ನೋವು ಬಾಽಸಬಹುದು. ಹೂಡಿಕೆಗೆ ಸೂಕ್ತ ದಿನವಲ್ಲ. ಬಂಧುಗಳಿಂದ ಟೀಕೆ ಕೇಳಿಬರಬಹುದು.
ತುಲಾ
ದೈನಂದಿನ ಒತ್ತಡ ಹೆಚ್ಚು. ಸಹೋದ್ಯೋಗಿ ಜತೆ ತಪ್ಪಭಿಪ್ರಾಯ ಉಂಟಾದೀತು. ಆರೋಗ್ಯ ಚಿಂತೆ ಪರಿಹಾರ. ಆತ್ಮೀಯರ ಭೇಟಿ.  
ವೃಶ್ಚಿಕ
ಅದೃಷ್ಟ ನಿಮ್ಮ ಜತೆಗಿದೆ. ಕಾರ್ಯಸಿದ್ಧಿ. ಕಠಿಣ ಪರಿಸ್ಥಿತಿ ಸುಗಮ ಪರಿಹಾರ ಕಾಣಲಿದೆ. ಆರೋಗ್ಯ ಸುಸ್ಥಿರ. ಆರ್ಥಿಕ ಸ್ಥಿತಿ ಉತ್ತಮಗೊಳ್ಳಲಿದೆ.  
ಧನು
ಅದೃಷ್ಟ ನಿಮ್ಮ ಜತೆಗಿಲ್ಲ. ಪ್ರತಿ ಕೆಲಸಕ್ಕೆ ಹೆಚ್ಚುವರಿ ಶ್ರಮ ಬೇಕು. ಮನೆಯಲ್ಲಿ ವಾಗ್ವಾದ ನಡೆದೀತು. ಅನ್ಯರ ಮನ ನೋಯಿಸದಿರಿ.  
ಮಕರ
ಖಾಸಗಿ ಬದುಕಲ್ಲಿ ಏರುಪೇರು. ಯಾವುದೇ ವಿಚಾರ ಕಡೆಗಣಿಸಬೇಡಿ.   ಕೆಲ ವಿಷಯ ಪೂರಕ ಆಗಿದ್ದರೂ ಪ್ರತಿಕೂಲ ಸ್ಥಿತಿ ಕೂಡ ಎದುರಿಸುವಿರಿ.
ಕುಂಭ
ಹೆಚ್ಚು ಹೊಣೆ. ಹೆಚ್ಚು ಒತ್ತಡ. ಧನ ನಷ್ಟ ಉಂಟಾದೀತು. ಎಚ್ಚರಿಕೆ ಅವಶ್ಯ. ನಿಮಗೆ ಆಗದವರು ನಿಮ್ಮ ಪತನಕ್ಕೆ ಯತ್ನಿಸುವರು.  
 ಮೀನ
ಗುರಿ ಸಾಧನೆ. ಈ ದಿನ ನಿಮ್ಮ ಪಾಲಿಗೆ ಹೆಚ್ಚು -ಲಪ್ರದ. ದೇಹಾರೋಗ್ಯ ಸ್ಥಿರ. ಮನೆಯಲ್ಲಿ ವಿರಸ ನಿವಾರಣೆ. ಬಂಧುಗಳಿಂದ ಶುಭ ಸುದ್ದಿ ಕೇಳುವಿರಿ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !