ಹೊಸದಿಗಂತ ವರದಿ ಹುಬ್ಬಳ್ಳಿ:
ಕೋಮು ರಾಜಕಾರಣ ಮಾಡೋದಕ್ಕೆ ಕಾಂಗ್ರೆಸ್ ಪಕ್ಷದಲ್ಲಿ ಜಾಗವಿಲ್ಲ. ಜನರು ಬದುಕು, ಉದ್ಯೋಗ ಹಾಗೂ ಅಭಿವೃದ್ಧಿಗೆ ಆದ್ಯತೆ ನೀಡುವುದು ನಮ್ಮ ಕರ್ತವ್ಯ ಎಂದು ಆರೋಗ್ಯ ಸಚಿವ ದಿನೇಶ ಗುಂಡೂರಾವ್ ಹೇಳಿದರು.
ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ತುಂಬಾ ದೊಡ್ಡ ದೊಡ್ಡ ಸಮಸ್ಯೆಗಳಿವೆ. ಇಂತಹದೆಲ್ಲಾ ಚರ್ಚೆ ಆಗಬಾರದು ಎಂಬುವುದು ಬಿಜೆಪಿ ಮುಖ್ಯ ಉದ್ದೇಶವಾಗಿದೆ. ಆದ್ದರಿಂದ ಬೇರೆ ವಿಚಾರವಿಟ್ಟುಕೊಂಡು ಗಮನ ಬೇರೆಡೆ ಸೆಳೆಯುತ್ತಿದ್ದಾರೆ ಎಂದರು.
ಕೇಂದ್ರ ಸರ್ಕಾರದಿಂದ ರಾಜ್ಯ ಸರ್ಕಾರಕ್ಕೆ ಅನ್ಯಾಯ ವಾಗುತ್ತಿದೆ. ಈ ಬಗ್ಗೆ ಹೆಚ್ಚು ಚರ್ಚೆ ಆಗಬೇಕು. ಎಷ್ಟು ಅನ್ಯಾಯ ಆಗಿದೆ? ಎಷ್ಟು ಹಣ ಬರ್ಬೇಕಿತ್ತು? ಯಾಕೆ ಕೊಡ್ತಿಲ್ಲ ಎಂಬುವುದು ಮಾತನಾಡಬೇಕಿದೆ. ಬರಗಾಲದ ನಯಾ ಪೈಸೆನು ಕೇಂದ್ರದಿಂದ ನೀಡಿಲ್ಲ. ಈ ವಿಚಾರ ಬಗ್ಗೆ ಚರ್ಚೆ ಮಾಡೋಣ ಎಂದರು.