ಧರ್ಮ ಚಾವಡಿ ಸ್ವಾಮೀಜಿ ಆತ್ಮಹತ್ಯೆಯ ಸುತ್ತ ಈಗ ಅನುಮಾನದ ಹುತ್ತ!

ಹೊಸದಿಗಂ ಡಿಜಿಟಲ್‌ ಡೆಸ್ಕ್:‌ 

ದಕ್ಷಿಣ ಕನ್ನಡ ಜಿಲ್ಲೆಯ ಕಂದಾವರ ತಳಕಲ ಧರ್ಮ ಚಾವಡಿ ಮಠದ ಕೃಷ್ಣ ದೇವಿ ಪ್ರಸಾದ ಸ್ವಾಮೀಜಿ ಆತ್ಮಹತ್ಯೆ ಸ್ಥಳೀಯರಲ್ಲಿ ಅನುಮಾನ ಹುಟ್ಟುಹಾಕಿದೆ. ಸಂಸಾರದ ಬಂಧನದಿಂದ ವಿರಕ್ತಿ ಹೊಂದಿ ಸನ್ಯಾಸಿಯಾದ ವ್ಯಕ್ತಿ, ನೇಣು ಬಿಗಿದುಕೊಳ್ಳುವಷ್ಟು ಮಾನಸಿಕವಾಗಿ ದುರ್ಬಲರಾಗಲು ಸಾಧ್ಯವೇ? ಎನ್ನುವ ಪ್ರಶ್ನೆ ಸ್ವಾಮೀಜಿಯ ಶಿಷ್ಯವೃಂದದಿಂದದಲ್ಲಿ ಮೂಡಿದೆ.

ಈ ಸ್ಥಿತಿ ತಂದೊಡ್ಡಿದವರು ಯಾರು?
ಸಾವಿರಾರು ಶಿಷ್ಯರನ್ನು ಹೊಂದಿದ್ದ ಸ್ವಾಮೀಜಿ ಏಕಾಏಕಿ ಸಾವಿನ ಕುಣಿಕೆಗೆ ಕೊರಳೊಡ್ದುವ ಪರಿಸ್ಥಿತಿ ಸೃಷ್ಟಿ ಮಾಡಿದವರು ಯಾರು ಎಂಬುದು ಎಲ್ಲರನ್ನೂ ಕಾಡುವ ಪ್ರಶ್ನೆಯಾಗಿದೆ. 5 ವರ್ಷಗಳ ಹಿಂದೆ ಸಂಸಾರ ತ್ಯಜಿಸಿ ಮಠ ಸೇರಿದ ಸ್ವಾಮೀಜಿ ಶ್ರೀ ಮಹಾದೇವ, ಶ್ರೀಮಹಾದೇವಿ, ಅಣ್ಣಪ್ಪ ಸ್ವಾಮಿಯ ಆರಾಧನೆಯ ಜತೆಗೆ ಪ್ರಶ್ನಾ ಚಿಂತನವನ್ನು ನಡೆಸುತ್ತಿದ್ದರು. ಬಳಿಕ ಭಕ್ತರ ಸಂಖ್ಯೆ ಹೆಚ್ಚಾಗಿ ಖ್ಯಾತಿಯನ್ನು ಪಡೆದಿದ್ದರು.

ಸ್ಥಳೀಯರ ಮಾಹಿತಿಯತೆ ಮಠದಲ್ಲಿ ನಡೆಯುತ್ತಿದ್ದ ದೈವದರ್ಶನ, ಪ್ರೇತ ಉಚ್ಚಾಟನೆ ಮತ್ತು ಪ್ರಶ್ನೆ ಚಿಂತನೆಯಲ್ಲಿ ಪಾಲ್ಗೊಳ್ಳುತ್ತಿದ್ದವರೆಲ್ಲ ಹೆಚ್ಚಾಗಿ ಪರವೂರಿನವರಾಗಿದ್ದರು. ಸ್ವಾಮೀಜಿ ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಆಸ್ತಿಯನ್ನು ಹೊಂದಿದ್ದರು. ಕುಟುಂಬದ ಸಂಬಂಧ ಕಡಿದುಕೊಂಡಿದ್ದ ಸ್ವಾಮೀಜಿಯ ಆಸ್ತಿಯ ಮೇಲೆ ಕಣ್ಣು ಹಾಕಿದವರು ಯಾರಾದರೂ ಆಸ್ತಿಗಾಗಿ ಸ್ವಾಮೀಜಿ ಮೇಲೆ ಒತ್ತಡ ಹೇರಿದ್ದರೆ ಎನ್ನುವ ಅನುಮಾನ ಸ್ಥಳೀಯರಲ್ಲಿ ಮೂಡಿದೆ.

ಡೆತ್ ನೋಟ್ ಹರಿದವರು ಯಾರು?
ಸಾವಿಗೂ ಮುನ್ನ ಸ್ವಾಮೀಜಿ ಡೆತ್ ನೋಟ್ ಬರೆದಿಟ್ಟಿದ್ದು ಅದನ್ನು ಹರಿದು ಹಾಕಲಾಗಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಆದರೆ ಡೆತ್ ನೋಟ್ ಆತ್ಮಹತ್ಯೆಗೆ ಮುನ್ನ ಸ್ವಾಮೀಜಿ ಸ್ವತಃ ಹರಿದು ಹಾಕಿದ್ದಾರೆ ಎಂಬ ವಾದವೂ ಕೇಳಿಬಂದಿದೆ.
ಈ ನಡುವೆ ಸ್ವಾಮೀಜಿಯವರ ಪತ್ನಿ ಪ್ರಭಾ ಶೆಟ್ಟಿ ದೂರು ನೀಡಿದ್ದು ಸಾವಿನ ಬಗ್ಗೆ ಯಾವುದೇ ಅನುಮಾನ ವ್ಯಕ್ತಪಡಿಸಿಲ್ಲ ಎಂದು ಬಜಪೆ ಪೊಲೀಸ್ ಠಾಣೆಯ ಸರ್ಕಲ್ ಇನ್‌ಸ್ಪ್ಪೆಕ್ಟರ್ ಪ್ರಕಾಶ್ ಸ್ಪಷ್ಟಪಡಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!