ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ವ್ಯಾಪಕ ಪರ-ವಿರೋಧ ಚರ್ಚೆಗೆ ಗ್ರಾಸವಾಗಿರುವ ಜಾತಿಗಣತಿ ವಿಚಾರಕ್ಕೆ ಸಂಬಂಧಿಸಿದಂತೆ ‘ಶೇ.10% ರಷ್ಟು ತಪ್ಪಾಗಿರಬಹುದು. ನಾಯಿ ಇರುವ ಮನೆಯಲ್ಲಿ ಜಾತಿ ಗಣತಿ ಮಾಡೋಕೆ ಆಗಿಲ್ಲ ಎಂದು ಕಾಂಗ್ರೆಸ್ ನಾಯಕ ಹೆಚ್ ರೇವಣ್ಣ ಸಮರ್ಥನೆ ಹೇಳಿದ್ದಾರೆ.
ಜಾತಿ ಗಣತಿ ಕುರಿತ ಪರ-ವಿರೋಧ ಚರ್ಚೆಗಳ ನಡುವೆಯೇ ಮಾಜಿ ಸಚಿವ ಎಚ್.ಎಂ ರೇವಣ್ಣ , ಜಾತಿ ಗಣತಿಯಲ್ಲಿ 10% ತಪ್ಪಾಗಿರಬಹುದು ಅಂತ ಹೇಳಿದ್ದಾರೆ. ಕೆಲವರು ಮನೆಗಳಲ್ಲಿ ನಾಯಿಗಳನ್ನು ಕಟ್ಟಿ ಹಾಕಿರುತ್ತಾರೆ. ಇನ್ನೂ ಕೆಲವು ಮನೆಗಳಲ್ಲಿ ಬಾಗಿಲು ತೆಗೆದಿರುವುದಿಲ್ಲ ಇನ್ನೂ ಕೆಲವು ಮನೆಗಳಿಗೆ ಹೋಗುವುದಕ್ಕೆ ಸಾಧ್ಯವಾಗಿರುವುದಿಲ್ಲ. ಈ ರೀತಿ ಕೆಲವು ಮನೆಗಳಿಗೆ ಹೋಗಲು ಆಗದೆ ಇರುವುದು ತಪ್ಪಲ್ಲ. ಏನಾದರೂ ಬಿಟ್ಟು ಹೋಗುವುದಕ್ಕೆ ಸಾಧ್ಯವಿದೆ. ಈಗ ಹೇಳುವುದಕ್ಕೆ ಅವಕಾಶ ಇದೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಹಾಗೂ ಲಿಂಗಾಯತ ಸಮುದಾಯದ ಪ್ರಭಾವಿ ನಾಯಕ ಶಾಮನೂರು ಶಿವಶಂಕರಪ್ಪ ಕೂಡ ಜಾತಿ ಜನಗಣತಿ ವರದಿ ವಿರುದ್ಧ ಕಿಡಿಕಾರಿದ್ದು, ಲಿಂಗಾಯತರು ಹಾಗೂ ಒಕ್ಕಲಿಗರು ಒಗ್ಗಟ್ಟಿನಿಂದ ಹೋರಾಟ ನಡೆಸಲಿದ್ದಾರೆಂದು ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾದ ಅಧ್ಯಕ್ಷರೂ ಕೂಡ ಆಗಿರುವ ಹೇಳಿದ್ದಾರೆ.
ಇನ್ನು ಜಾತಿ ಗಣತಿ ವಿಚಾರದಲ್ಲಿ ಸ್ವಪಕ್ಷೀಯರು ಮತ್ತು ನಾಯಕರ ವಿರೋಧ ಎದುರಿಸುತ್ತಿರುವ ಸರ್ಕಾರ ಸಂಕಷ್ಟಕ್ಕೆ ಸಿಲುಕಿದ್ದು, ಸಚಿವರಲ್ಲಿ ಜಾತಿ ಜಟಾಪಟಿ ಕಿಡಿಹಾರಿದೆ.