ಹೊಸದಿಗಂತ ಡಿಜಿಟಲ್ ಡೆಸ್ಕ್:
ಗೋಕರ್ಣ ಮಹಾಬಲೇಶ್ವರ ದೇವಸ್ಥಾನದ ನಂದಿ ಮಂಟಪದಲ್ಲಿ ತೀರ್ಥ ನೀಡುವ ಹಕ್ಕಿಗಾಗಿ ಎರಡು ಮನೆತನದ ಅರ್ಚಕರ ನಡುವೆ ಗಲಾಟೆಯಾಗಿದೆ.
ಈ ಹಿನ್ನೆಲೆ ಏಳು ದಿನದವರೆಗೆ ಯಥಾ ಸ್ಥಿತಿ ಮುಂದುವರೆಸುವಂತೆ ಕುಮಟಾ ಸಹಾಯಕ ಆಯುಕ್ತೆ ಕಲ್ಯಾಣಿ ಕಾಂಬ್ಳೆ ಅವರು ಸೂಚನೆ ನೀಡಿದ್ದಾರೆ. ಅದರಂತೆ ಎಸಿ ಸೂಚನೆ ಹಿನ್ನೆಲೆ ಜಂಬೆ ಮನೆತನದ ಅರ್ಚಕರು ನಂದಿ ಮಂಟಪದಲ್ಲಿ ತೀರ್ಥ ನೀಡುವ ಕಾಯಕ ಮುಂದುವರೆಸಿದ್ದಾರೆ.
ಇನ್ನು ಸಹಾಯಕ ಆಯುಕ್ತರ ಮಧ್ಯಸ್ಥಿಕೆಯಲ್ಲಿ ದೇವಸ್ಥಾನದ ಗರ್ಭಗುಡಿಯಲ್ಲಿ ಪ್ರತಿಭಟನೆಗಿಳಿದಿದ್ದ ಗೋಪಿ ಮನೆತನದ ಅರ್ಚಕರು ಸಧ್ಯ ಪ್ರತಿಭಟನೆಯನ್ನು ಹಿಂದಕ್ಕೆ ಪಡೆದಿದ್ದಾರೆ. ದೇವಸ್ಥಾನದ ನಂದಿ ಮಂಟಪದಲ್ಲಿ ತೀರ್ಥ ನೀಡುವ ವಿಚಾರವಾಗಿ ಜಂಬೆ ಮನೆತನ ಹಾಗೂ ಗೋಪಿ ಮನೆತನದ ನಡುವೆ ಇಂದು ವಿವಾದ ಏರ್ಪಟ್ಟಿತ್ತು. ನಿಗದಿಯಂತೆ ಜಂಬೆ ಮನೆತನ ಗೋಪಿ ಮನೆತಕ್ಕೆ ತೀರ್ಥ ನೀಡುವ ಕಾಯಕ ವಹಿಸುವಂತೆ ಮಹಾಬಲೇಶ್ವರ ದೇವಸ್ಥಾನದ ಗರ್ಭಗುಡಿಯಲ್ಲಿ ಗೋಪಿ ಮನೆತನದ ಅರ್ಚಕರು ಪ್ರತಿಭಟನೆಗಿಳಿದಿದ್ದರು.