VIDEO | ಅದೃಷ್ಟ ಇತ್ತು, ಸ್ವಲ್ಪದ್ರಲ್ಲೇ ಬಚಾವ್‌ ಆದ್ರು! ಮಳೆಯಲ್ಲೇ ರೀಲ್ಸ್‌ ಮಾಡೋ ಹುಚ್ಯಾಕೆ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ದೇಶಾದ್ಯಂತ ಮಳೆ ಸುರಿಯುತ್ತಿದ್ದು, ಜನ ಮನೆಯಿಂದ ಹೊರಬರೋದಕ್ಕೂ ಹಿಂದೆ ಮುಂದೆ ನೋಡ್ತಿದ್ದಾರೆ. ಪ್ರತಿದಿನ ನ್ಯೂಸ್‌ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಸಿಡಿಲು ಬಡಿದು ಜನ ಮೃತಪಡುತ್ತಿರುವ ಸುದ್ದಿಗಳನ್ನು ಓದುತ್ತಲೇ ಇದ್ದಾರೆ. ಆದರೂ ಈ ಮಳೆಯಲ್ಲಿ ರೀಲ್ಸ್‌ ಮಾಡುವ ಹುಚ್ಚು ಕಡಿಮೆಯಾಗಿಲ್ಲ.

ಇದೀಗ ಮಳೆಯಲ್ಲಿ ರೀಲ್ಸ್‌ ಮಾಡಲೆಂದು ಬಂದ ಬಾಲಕಿ ಹಿಂಬದಿಯಲ್ಲಿ ದೊಡ್ಡ ಪ್ರಮಾಣದ ಸಿಡಿಲು ಬಡಿದಿದ್ದು, ಬಾಲಕಿ ಸದ್ಯದಲ್ಲೇ ಬಚಾವ್‌ ಆಗಿದ್ದಾಳೆ. ಆಕೆಯ ಅದೃಷ್ಟ ಚೆನ್ನಾಗಿತ್ತು ಎಂದು ಜನ ಹೇಳುತ್ತಿದ್ದಾರೆ. ಆಕೆಯ ಹಿಂದೆ ಸಿಡಿಲು ಬಂದಿರುವ ವಿಡಿಯೋ ಇದೀಗ ಎಲ್ಲೆಡೆ ವೈರಲ್‌ ಆಗಿದೆ.

@sdcworldoffl ಹೆಸರಿನ ಎಕ್ಸ್‌ ಖಾತೆಯಲ್ಲಿ ಈ ಕುರಿತ ಪೋಸ್ಟ್‌ ಒಂದನ್ನು ಹಂಚಿಕೊಳ್ಳಲಾಗಿದ್ದು, ಬಿಹಾರದ ಸೀತಾಮರ್ಹಿಯಲ್ಲಿ ಬಾಲಕಿಯೊಬ್ಬಳು ರೀಲ್ಸ್‌ ವಿಡಿಯೋ ಮಾಡುತ್ತಿರುವಾಗ ಸಿಡಿಲು ಬಡಿದಿದ್ದು, ಹುಡುಗಿ ಪ್ರಾಣಾಪಾಯದಿಂದ ಪಾರಾಗಿದ್ದಾಳೆ ಎನ್ನುವ ಕ್ಯಾಪ್ಷನ್‌ ಇದೆ.

ರೀಲ್ಸ್‌ ಇಂದಲ್ಲಾ ನಾಳೆ ಮಾಡಬಹುದು, ಮಾಡಿದರೂ ನೂರಾರು ಲೈಕ್‌ ಬರಬಹುದು ಆದರೆ ಒಮ್ಮೆ ಪ್ರಾಣ ಹೋದರೆ ಅಥವಾ ಅಪಘಾತ ಸಂಭವಿಸಿದರೆ ನಿಮ್ಮ ಕುಟುಂಬ ಹಾಗೂ ನಿಮ್ಮ ಲೈಫ್‌ ಕಥೆ ಏನು ಅನ್ನೋದನ್ನು ಯೋಚಿಸಿ. ಸೇಫ್‌ ಜಾಗದಲ್ಲಿ ಮಾತ್ರ ರೀಲ್ಸ್‌ ಮಾಡಿ. ಜೀವಕ್ಕಿಂತ ಯಾವುದೂ ಹೆಚ್ಚಲ್ಲ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!