ಪ್ರಧಾನಿ ಮೋದಿ ಅವರ ರೋಡ್ ಶೋ ವೇಳೆ ಭದ್ರತಾ ಲೋಪ ಆಗಿಲ್ಲ: ಪೊಲೀಸ್ ಆಯುಕ್ತರ ಸ್ಪಷ್ಟನೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಹುಬ್ಬಳ್ಳಿ ನಗರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ರೋಡ್ ಶೋ ವೇಳೆ ಹೂ ಹಿಡಿದುಕೊಂಡು 11 ವರ್ಷದ ಬಾಲಕ ಬಂದಿದ್ದು , ಆದರೆ ಇಲ್ಲಿ ಯಾವುದೇ ರೀತಿಯ ಭದ್ರತಾ ಲೋಪ ಆಗಿಲ್ಲ ಎಂದು ನಗರ ಪೊಲೀಸ್ ಆಯುಕ್ತರು ಸ್ಪಷ್ಟಪಡಿಸಿದ್ದಾರೆ.

ನಗರ ಪೊಲೀಸ್ ಆಯುಕ್ತ ರಮಣ್ ಗುಪ್ತಾ, ಬ್ಯಾರಿಕೇಡ್ ಹಾರಿದ್ದ ಬಾಲಕ ಮೋದಿಯನ್ನು ನೋಡಿದ ಉತ್ಸಾಹದಲ್ಲಿ ಈ ರೀತಿ ಮಾಡಿದ್ದಾನೆ. ಈ ರೀತಿ ಲಕ್ಷಾಂತರ ಜನರು ಸೇರುವ ಸಂದರ್ಭ ಬ್ಯಾರಿಕೇಡ್ ಹಾರುವಂತಹ ಘಟನೆ ಸಾಮಾನ್ಯ. ಆತ ಸಣ್ಣ ಬಾಲಕನಾಗಿದ್ದರಿಂದ ಬಹುಶಃ ಆತನ ತಿಳುವಳಿಕೆ ತಪ್ಪಿ ಈ ರೀತಿ ಮಾಡಿದ್ದಾನೆ. ಇಲ್ಲಿ ಯಾವುದೇ ಭದ್ರತಾ ಲೋಪ ಆಗಿಲ್ಲ. ಈ ಬಗ್ಗೆ ಸೂಕ್ತ ಪರಿಶೀಲನೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.

ಹುಬ್ಬಳ್ಳಿಯ ಗೋಕುಲ್ ರಸ್ತೆಯಲ್ಲಿ ಮೋದಿ ರೋಡ್ ಶೋ ನಡೆಯುವಾಗ ಇದ್ದಕ್ಕಿದ್ದಂತೆ ಬ್ಯಾರಿಕೇಡ್ ಹಾರಿದ ಬಾಲಕನೊಬ್ಬ ಮೋದಿಗೆ ಹೂವಿನ ಹಾರ ಹಾಕಲು ಮುಂದಾಗಿದ್ದ. ಆದರೆ ಮೋದಿ, ನಗುನಗುತ್ತಲೇ ಹೂವಿನ ಹಾರವನ್ನು ತೆಗೆದುಕೊಂಡಿದ್ದಾರೆ. ಬಳಿಕ ಭದ್ರತಾ ಸಿಬ್ಬಂದಿಗೆ ಹಸ್ತಾಂತರ ಮಾಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!