ಹೊಸದಿಗಂತ ವರದಿ ವಿಜಯಪುರ:
ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಆಗಲ್ಲ ಎಂದು ಸಚಿವ ಗೋವಿಂದ ಕಾರಜೋಳ ಹೇಳಿದರು.
ವಿಜಯಪುರ ತಾಲೂಕಿನ ನಾಗಠಾಣದಲ್ಲಿ ಬಸ್ ತಂಗುದಾಣ ಉದ್ಘಾಟಿಸಿ, ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಇವೆಲ್ಲ ಊಹಾಪೋಹ, ಗಾಳಿ ಸುದ್ದಿಗಳಿಗೆ ಬಹಳ ಬೆಲೆ ಕೊಡಬಾರದು. ಯಾವುದೇ ಕಾರಣಕ್ಕೂ ಸಿಎಂ ಬದಲಾವಣೆ ಆಗಲ್ಲ. ಅಲ್ಲದೇ, ನಾನೇನು ಸಿಎಂ ಆಗಲ್ಲ, ಇವೆಲ್ಲವೂ ಗಾಳಿ ಸುದ್ದಿ ಆಗಿದೆ ಎಂದರು.
ನಮ್ಮ ಇಲಾಖೆ ಕೆಲಸ ಕಾರ್ಯಗಳಿಗಾಗಿ ದೆಹಲಿಗೆ ಹೋಗಿದ್ದೇನೆ. ನನ್ನ ಜೊತೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡ ಬಂದಿದ್ದರು ಎಂದರು.