ಎಂದಿನಂತೆ ದೇಹ ಇಲ್ಲ, ಏನೇನೋ ವ್ಯತ್ಯಾಸ ಆಗ್ತಾ ಇದೆ, ಲೈಫ್ ಬದಲಾವಣೆ ಆಗ್ತಾ ಇದೆ ಅಂದರೆ ಅದು ಮಾಮೂಲಿ ಅಲ್ಲವೇ ಅಲ್ಲ. ದೇಹದಲ್ಲಿ ಆಗುವ ಬದಲಾವಣೆಗಳಿಗೆ ಅರ್ಥ ಖಂಡಿತ ಇದೆ. ಅದರಲ್ಲಿಯೂ ಶುಗರ್ ನಿಮ್ಮ ದೇಹಕ್ಕೆ ಹತ್ತಿರವಾಗುತ್ತಿದೆ ಎಂದಾದರೆ ಈ ಐದು ಲಕ್ಷಣಗಳು ಕಾಣುತ್ತವೆ. ಯಾವುದು ನೋಡಿ..
ಯಾವಾಗಲೂ ಅತಿಯಾದ ಬಾಯಾರಿಕೆ, ಎಷ್ಟು ನೀರು ಕುಡಿದರೂ ಸಮಾಧಾನ ಇಲ್ಲ.
ಪದೇ ಪದೆ ಯುರಿನ್ ಬರುತ್ತದೆ. ರಾತ್ರಿಯಲ್ಲಿ ಇನ್ನೂ ಹೆಚ್ಚು ಅರ್ಜೆಂಟ್ ಎನಿಸುತ್ತದೆ.
ಎಷ್ಟೇ ಒಳ್ಳೆಯ ಆಹಾರ ತಿಂದರೂ ಸುಸ್ತು. ಎನರ್ಜಿಯೇ ಇಲ್ಲ ಎಂದೆನಿಸುತ್ತದೆ.
ಕಣ್ಣಿನಲ್ಲಿ ಕೆಲವು ಬದಲಾವಣೆ ಆಗುತ್ತದೆ. ನಿಮ್ಮ ದೃಷ್ಟಿ ಬ್ಲರ್ ಆದಂತೆ ಅನಿಸುತ್ತದೆ.
ಕುತ್ತಿಗೆ ಬಳಿ ಅಥವಾ ದೇಹದ ಇನ್ನಿತರ ಭಾಗದಲ್ಲಿ ಕಪ್ಪು ಕಲೆಗಳು ಕಾಣಿಸುತ್ತದೆ. ಇದನ್ನು ಕಡೆಗಣಿಸಬೇಡಿ. ತಕ್ಷಣವೇ ವೈದ್ಯರನ್ನು ಭೇಟಿ ಮಾಡಿ.