ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಹುನಿರೀಕ್ಷಿತ ಕೇಂದ್ರ ಬಜೆಟ್ ಮಂಡನೆಯಾಗಿದ್ದು, ಈ ಬಾರಿಯ ಬಜೆಟ್‌ನಲ್ಲಿ ಜನಸಾಮಾನ್ಯರಿಗೆ ಆಗಿರುವ ಲಾಭಗಳಿವು..
1. 12 ಲಕ್ಷ ರೂಪಾಯಿ ವರೆಗಿನ ಆದಾಯಕ್ಕೆ ಯಾವುದೇ ತೆರಿಗೆ ಇಲ್ಲ
2. 25 ಲಕ್ಷ ರೂಪಾಯಿ ಆದಾಯ ಗಳಿಸುವ ವ್ಯಕ್ತಿ 1,10,000 ರೂಪಾಯಿ ಆದಾಯ ತೆರಿಗೆ ಲಾಭ ಪಡೆಯಲಿದ್ದಾರೆ. 18 ಲಕ್ಷ ರೂಪಾಯಿ ಆದಾಯ ಗಳಿಸುವ ವ್ಯಕ್ತಿ 70,000 ರೂಪಾಯಿ ವರೆಗೆ ಆದಾಯ ತೆರಿಗೆ ಉಳಿತಾಯ ಮಾಡಬಹುದು.
3. ಮೊಬೈಲ್ ಫೋನ್, ಬ್ಯಾಟರಿ ಸೇರಿದಂತೆ 28 ಬಂಡವಾಳ ಸರಕುಗಳ ನೇರ ತೆರಿಗೆಯಲ್ಲಿ ವಿನಾಯಿತಿ
4. ಸ್ಟಾರ್ಟ್‌ಅಪ್ ತೆರಿಗೆ ಪ್ರಯೋಜನಗಳನ್ನು ಮುಂದಿನ 5 ವರ್ಷಕ್ಕೆ ವಿಸ್ತರಿಸಲಾಗುತ್ತಿದೆ
5. ಪಿಎಂ ಜನ ಆರೋಗ್ಯ ಯೋಜನೆ ಮೂಲಕ ಕಾರ್ಮಿಕರಿಗೆ ಆರೋಗ್ಯ ವಿಮೆ ಸೌಲಭ್ಯ ವಿಸ್ತರಣೆ
6. 10 ಲಕ್ಷ ರೂಪಾಯಿ ವರೆಗಿನ ಶಿಕ್ಷಣ ಸಾಲದ ಮೇಲಿನ ಟಿಸಿಎಸ್ ವಿನಾಯಿತಿ
7. 2.4 ಲಕ್ಷ ರೂಪಾಯಿಯಿಂದ 6 ಲಕ್ಷ ರೂಪಾಯಿ ವರೆಗಿನ ವಾರ್ಷಿಕ ಟಿಡಿಎಸ್ ಏರಿಕೆ
8. ಹಿರಿಯ ನಾಗರೀಕರ ತೆರಿಗೆ ಡಿಡಕ್ಷನ್ ಮಿತಿಯನ್ನು 1 ಲಕ್ಷ ರೂಪಾಯಿಗೆ ಏರಿಕೆ ಮಾಡಲಾಗಿದೆ
9. SWAMIH ನಿಧಿ 2 ಸ್ಥಾಪನೆ, ಈ ಮೂಲಕ ಮಧ್ಯಮ ವರ್ಗ ಕುಟುಂಬಗಳಿಗೆ ವಸತಿ ಯೋಜನೆ ಪ್ರಯೋಜನ
26 ಜೀವ ಉಳಿಸುವ ಔಷಧಗಳ ಸುಂಕ ಸಂಪೂರ್ಣ ಕಡಿತ
10. ಕೆಲ ಔಷಧಗಳ ಸುಂಕದ ಮೇಲೆ ಶೇಕಡಾ 5 ರಷ್ಟು ಕಡಿತ