ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿದೆ ಅನ್ನೋದು ಸುಳ್ಳಲ್ಲ. ಸಂದರ್ಭಕ್ಕೆ ತಕ್ಕ ಹಾಗೆ ಆರೋಗ್ಯ ಅನ್ನೋ ಮಾತನ್ನು ಅಲ್ಪ ಸ್ವಲ್ಪ ಒಪ್ಪಿಕೊಳ್ಳಬಹುದು. ಬಟ್ ಎಲ್ಲವನ್ನೂ ಕಂಟ್ರೋಲ್ ಮಾಡುವ ಶಕ್ತಿ ನಿಮ್ಮಲ್ಲೇ ಇರುತ್ತದೆ. ಹೀಗಾಗಿ ಆರೋಗ್ಯ ಚೆನ್ನಾಗಿ ನೋಡಿಕೊಳ್ಳಿ. ಆರೋಗ್ಯ ಇದ್ದರೆ ನೂರಾರು ಸಮಸ್ಯೆ, ಬಟ್ ಆರೋಗ್ಯ ಕೆಟ್ಟರೆ ಅದೊಂದೇ ಸಮಸ್ಯೆ.. ನಿಮ್ಮ ಆರೋಗ್ಯ ಹಾಳು ಮಾಡೋದು ಇದೇ ಐದು ಅಭ್ಯಾಸ
- ಧೂಮಪಾನ ಮಾಡೋದ್ರಿಂದ ಹೃದಯ ಸಂಬಂಧಿ ಕಾಯಿಲೆ, ಕ್ಯಾನ್ಸರ್, ಡಯಾಬಿಟಿಸ್ ಇನ್ನಿತರ ಸಮಸ್ಯೆ ಗ್ಯಾರೆಂಟಿ.
2. ಅತಿಯಾಗಿ ಉಪ್ಪು ತಿನ್ಬೇಡಿ. ಹೈಬಿಪಿ ಬೇಗನೇ ವಕ್ಕರಿಸುತ್ತದೆ.
3. ನಿದ್ದೆ ಮಾಡದೇ ಇರುವುದು ದೊಡ್ಡ ಸಮಸ್ಯೆನೇ. ಬರೀ ಮೊಬೈಲ್ ನೋಡಿ ಟೈಮ್ ವೇಸ್ಟ್ ಮಾಡ್ಬೇಡಿ. ಎಂಟು ಗಂಟೆ ದಿನವೂ ನಿದ್ದೆ ಮಾಡಿ.
4. ಯಾವಾಗಲೂ ಕುಳಿತೇ ಇರುವುದು. ಕೂತಲ್ಲೇ ಕೂತು ಕೆಲಸ ಮಾಡುವುದು ಬೇಡ. ಆಗಾಗ ಓಡಾಡಿ.
5. ಅತಿಯಾಗಿ ಹೆಚ್ಚು ಸಮಯ ಬಿಸಿಲಿನಲ್ಲಿ ಕೆಲಸ ಮಾಡುವುದು. ಯಾವುದೇ ಸನ್‌ಸ್ಕ್ರೀನ್ ಇಲ್ಲದೆ ಇರುವುದು ಉತ್ತಮವಲ್ಲ.