ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತದಲ್ಲಿ ಬೀದಿ ಆಹಾರದಲ್ಲಿ ಹಲವು ಬಗೆಯ ಸಿಹಿತಿಂಡಿಗಳು ಬಹಳ ಪ್ರಸಿದ್ಧವಾಗಿವೆ. ಅದರಲ್ಲೂ ಸಿಹಿ ತಿಂಡಿಗಳಿಗೆ ವ್ಯಾಪಕ ಬೇಡಿಕೆಯಿದೆ. ಊಟ ಮುಗಿಸುವ ಮುನ್ನ ಸಿಹಿ ತಿನ್ನುವುದು ಇಲ್ಲಿನ ವಾಡಿಕೆ. ಜಗತ್ತಿನಾದ್ಯಂತ ಎಷ್ಟೇ ಜನಪ್ರಿಯ ಸಿಹಿ ತಿಂಡಿಗಳಿದ್ದರೂ ಕೂಡ ಭಾರತೀಯ ಸಿಹಿತಿಂಡಿಗಳು ಪ್ರಪಂಚದಾದ್ಯಂತ ಹೆಸರು ಗಳಿಸಿವೆ. ಕ್ರೊಯೇಷಿಯಾ ಮೂಲದ ಆನ್‌ಲೈನ್ ಪ್ರಯಾಣ ಮತ್ತು ಆಹಾರ ಮಾರ್ಗದರ್ಶಿ ಟೇಸ್ಟ್ ಅಟ್ಲಾಸ್ ‘ವಿಶ್ವದ ಅತ್ಯುತ್ತಮ ಬೀದಿ ಆಹಾರ ಸಿಹಿತಿಂಡಿಗಳ’ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದರಲ್ಲಿ ನಮ್ಮ ಭಾರತೀಯ ಸಿಹಿತಿಂಡಿಗಳೂ ಸ್ಥಾನ ಪಡೆದಿರುವುದು ವಿಶೇಷ.
ದಕ್ಷಿಣ ಭಾರತದ ‘ಮೈಸೂರು ಪಾಕ್’ 14ನೇ ರ್ಯಾಂಕ್‌ನಲ್ಲಿದ್ದರೆ.. ‘ಕುಲ್ಫಿ’ 18ನೇ ಸ್ಥಾನ ಪಡೆದಿದೆ. ಈ ಪಟ್ಟಿಯಲ್ಲಿ ‘ಕುಲ್ಫಿ ಫಲೂಡಾ’ 32ನೇ ಸ್ಥಾನವನ್ನೂ ಪಡೆದುಕೊಂಡಿದೆ. ಮತ್ತು ಪೋರ್ಚುಗೀಸ್ ಎಗ್ ಕಸ್ಟರ್ಡ್ ಟಾರ್ಟ್ ‘ಪಾಸ್ಟಲ್ ಡಿ ನಾಟಾ’ ವಿಶ್ವದ ಅತ್ಯುತ್ತಮ ಬೀದಿ ಆಹಾರ ಸಿಹಿಯಾಗಿ ನಂಬರ್ ಒನ್ ಸ್ಥಾನದಲ್ಲಿದೆ.
ಈ ಪಟ್ಟಿಯಲ್ಲಿ ಜಾವಾ, ಇಂಡೋನೇಷ್ಯಾ ‘ಸೆರಾಬಿ’ ಎರಡನೇ ಸ್ಥಾನ ಪಡೆದುಕೊಂಡಿದೆ. ಟೇಸ್ಟ್‌ಅಟ್ಲಾಸ್ ಪ್ರಕಾರ, ಟರ್ಕಿಯ ಕಹ್ರಾಮನ್‌ಮರಸ್‌ನ ‘ಡೊಂಡುರ್ಮಾ’ ವಿಶ್ವದ ಮೂರನೇ ಅತ್ಯುತ್ತಮ ಬೀದಿ ಆಹಾರ ಸಿಹಿಯಾಗಿ ಸ್ಥಾನ ಪಡೆದಿದೆ.