ಒಂದರಿಂದ ಐದು ವರ್ಷದವರೆಗಿನ ಮಕ್ಕಳಿಗೆ ಈ ಐದು ಪದಾರ್ಥಗಳನ್ನು ನೀಡಬೇಡಿ. ಇದು ಆರೋಗ್ಯಕ್ಕೆ ಒಳ್ಳೆಯದೇ ಆದರೆ ಗಂಟಲಿಗೆ ಅಲ್ಲ. ಮಕ್ಕಳು ಇದನ್ನು ನುಂಗಲಾರದೆ ಒದ್ದಾಡಿ ಉಸಿರಾಡಲು ಕಷ್ಟವಾಗುತ್ತದೆ. ಪಿಸ್ತಾ ಸಿಪ್ಪೆ ಸೇವಿಸಿ ಮಗು ಮೃತಪಟ್ಟಿದ್ದು, ಪಾಪ್‌ಕಾರ್ನ್ ತಿನ್ನಲು ಹೋಗಿ ಮಕ್ಕಳು ಮೃತಪಟ್ಟ ಸುದ್ದಿ ಓದಿರುತ್ತೀರಿ. ಈ ಐದು ಪದಾರ್ಥಗಳನ್ನು ಮಕ್ಕಳಿಗೆ ನೀಡಬೇಡಿ..
ಪೀನಟ್ ಬಟರ್ ಆರೋಗ್ಯಕ್ಕೆ ಒಳ್ಳೆಯದು ಆದರೆ ಸ್ಪೂನ್ ಇಡೀ ಪೀನಟ್ ಬಟರ್ ಹಾಗೇ ನೀಡಬೇಡಿ. ಅದನ್ನು ನುಂಗಿದರೆ ಗಂಟಲಿಗೆ ಸಿಕ್ಕು ಉಸಿರಾಡಲು ಒದ್ದಾಡುತ್ತಾರೆ.
ಕ್ಯಾರೆಟ್ ಸಣ್ಣ ಪೀಸ್ ಆಗಿ ನೀಡಿ, ಇಲ್ಲವೇ ತುರಿದು ಕೊಡಿ. ಬಟ್ ಹಾಗೇ ಕೊಟ್ಟರೆ ದೊಡ್ಡ ಪೀಸ್ ಒಂದನ್ನು ಕಚ್ಚಿಕೊಳ್ಳುತ್ತಾರೆ. ಅಗಿಯಲು ಗ್ರಿಪ್ ಸಿಗದೇ ಹೋದರೆ ಗಂಟಲಿನಲ್ಲಿ ಸಿಕ್ಕಿಹಾಕಿಕೊಳ್ಳುತ್ತದೆ.
ಇನ್ನು ಮಕ್ಕಳ ಅನ್ನನಾಳ ದ್ರಾಕ್ಷಿಯ ಸೈಝ್‌ನಲ್ಲಿ ಇರುತ್ತದೆ. ಹಾಗಿರುವಾಗ ನೀವು ಇಡೀ ದ್ರಾಕ್ಷಿಯನ್ನು ತಿನ್ನೋದಕ್ಕೆ ಕೊಡಬೇಡಿ. ಅದನ್ನು ಎರಡು ಅಥವಾ ನಾಲ್ಕು ಪೀಸ್ ಮಾಡಿ ಕೊಡಿ.
ಸೇಬುಹಣ್ಣನ್ನು ಸಣ್ಣಗೆ ಕತ್ತರಿಸಿ ಫೋರ್ಕ್ ಹಾಕಿ ಕೊಡಿ, ಇಡೀ ಹಣ್ಣನ್ನು ತಿನ್ನೋದಕ್ಕೆ ನೀಡಬೇಡಿ. ಇದು ಚೋಕಿಂಗ್‌ಗೆ ಕಾರಣವಾಗುತ್ತದೆ.
ಪಾಪ್‌ಕಾರ್ನ್ ಮಕ್ಕಳಿಗೆ ಕೊಡುವಾಗ ಜಾಗರೂಕರಾಗಿರಿ. ಪಾಪ್‌ಕಾರ್ನ್ ಸೈಝ್ ದೊಡ್ಡದು ಜೊತೆಗೆ ಅದು ರಫ್ ಆಗಿರುವ ಕಾರಣ ಮಕ್ಕಳಿಗೆ ಹಾನಿಯುಂಟುಮಾಡುತ್ತದೆ.