HEALTH| ಅಡುಗೆ ಮನೆಯಲ್ಲಿರುವ ಈ ಎರಡು ವಸ್ತು ನಿಜಕ್ಕೂ ಸಂಜೀವಿನಿಯೇ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳಲು, ದೇಹಾರೋಗ್ಯ ವೃದ್ಧಿಸಲು ಜೇನು ಸಹಕಾರಿ. ಹಲವು ರೋಗಗಳಿಗೆ ಇದು ದಿವ್ಯೌಷಧಿ. ಬೆಳ್ಳುಳ್ಳಿ ಕೂಡಾ ಉತ್ತಮ ಔಷಧೀಯ ಗುಣ ಹೊಂದಿರುವಂತಹುದು. ಆಹಾರ ಪದಾರ್ಥಗಳ ಜೊತೆ ಜೊತೆಗೆ ನಾವು ಬೆಳ್ಳುಳ್ಳಿಯನ್ನೂ , ಜೇನನ್ನು ಬಳಸುತ್ತೇವೆ. ಆದರೆ ಇವೆರಡನ್ನು ಜೊತೆಯಲ್ಲಿ ತಿಂದರೆ ನಮ್ಮ ಆರೋಗ್ಯವನ್ನು ಇನ್ನಷ್ಟು ಉತ್ತಮವಾಗಿ ಕಾಪಾಡಬಹುದೆಂಬ ನೈಜ ಅಂಶ ಬೆಳಕಿಗೆ ಬಂದಿದೆ.

ಇಂದಿನ ಆಧುನಿಕ ಜಗತ್ತಿನಲ್ಲಿ ಆಧುನಿಕ ಆಹಾರ ಕ್ರಮದಿಂದಾಗಿ ದೇಹಾರೋಗ್ಯ ಹಾಳಾಗುವುದು ಸಹಜ. ಅನೇಕರಿಗೆ ಬೊಜ್ಜಿನ ಹಾಗೂ ತೂಕದ ಸಮಸ್ಯೆ ಎದುರಾಗುತ್ತಿದೆ. ಇದನ್ನು ನಿಯಂತ್ರಿಸಲು ಖಾಲಿ ಹೊಟ್ಟೆಯಲ್ಲಿ ಜೇನುತುಪ್ಪದೊಂದಿಗೆ ಬೆಳ್ಳುಳ್ಳಿಯನ್ನು ಸೇವಿಸಬಹುದಾಗಿದೆ. ಜೊತೆಗೆ ಹೃದಯದ ರೋಗಗಳಿಂದಲೂ ದೂರವಿರುವಂತೆ ಮಾಡುತ್ತದೆ. ಖಾಲಿ ಹೊಟ್ಟೆಯಲ್ಲಿ ಬೆಳ್ಳುಳ್ಳಿ ಹಾಗೂ ಜೇನು ಸೇವಿಸುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಅಲರ್ಜಿಯಂತಹ ಅನೇಕ ರೋಗಗಳು ದೂರವಾಗುತ್ತದೆ. ಶೀತದ ತೊಂದರೆಯಿದ್ದವರು ಈ ಮಿಶ್ರಣ ಸೇವಿಸಿದರೆ ಉತ್ತಮ ಪರಿಣಾಮ ಕಾಣುತ್ತದೆ.

ಬೆಳ್ಳುಳ್ಳಿ ಹಾಗೂ ಜೇನುತುಪ್ಪ ಜೊತೆಯಾಗಿ ಸೇವಿಸುವುದರಿಂದ ಶೀತ ಜ್ವರಕ್ಕೆ ಪ್ರಯೋಜನವಾಗುತ್ತದೆ. ಗಂಟಲು ನೋವಿನ ಸಮಸ್ಯೆಯಿಂದಲೂ ಮುಕ್ತಿ ಕಾಣಬಹುದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!