ಅವರೆಲ್ಲಾ ದೊಡ್ಡವರು…ಎದುರು ಹಾಕಿಕೊಂಡು ಬದುಕೋಕೆ ಆಗುತ್ತಾ?: ಉಮಾಪತಿ ರಿಯಾಕ್ಷನ್

ಹೊಸದಿಗಂತ ಡಿಜಿಟಲ್ ಡೆಸ್ಕ್:

‘ಕಾಟೇರ’ (Kaatera) ಸಕ್ಸಸ್ ಮೀಟ್‌ನಲ್ಲಿ ನಿರ್ಮಾಪಕ ಉಮಾಪತಿ ವಿರುದ್ಧ ನಟ ದರ್ಶನ್ ಮಾತನಾಡಿದ್ದು, ‘ಕಾಟೇರ’ ಟೈಟಲ್ ನಾನೇ ಕೊಟ್ಟಿದ್ದು ಎಂದ ಉಮಾಪತಿಗೆ ದರ್ಶನ್ (Darshan) ಕೌಂಟರ್ ಕೊಟ್ಟಿದ್ದರು. ಇದೀಗ ದರ್ಶನ್ ಹೇಳಿಕೆಗೆ ಉಮಾಪತಿ ಉತ್ತರ ನೀಡಿದ್ದಾರೆ.

ಅವರೆಲ್ಲಾ ದೊಡ್ಡವರು, ನಾವು ಚಿಕ್ಕವರು ಬಿಡಿ ಹೇಳಿಕೊಂಡು ಓಡಾಲಿ ಬಿಡಿ. ದರ್ಶನ್ ಅವರನ್ನು ಎದುರು ಹಾಕಿಕೊಂಡು ಬದುಕೋಕೆ ಆಗುತ್ತಾ? ಎಂದು ಉಮಾಪತಿ ಮಾತನಾಡಿದ್ದಾರೆ.

ಕಾಟೇರ ರಿಜಿಸ್ಟರ್ ಮಾಡಿದ್ದೆ ನಾನು. ‘ಮದಗಜ’ ಸಮಯದಲ್ಲಿ ಎಲ್ಲರೂ ನನ್ನ ಮಿಸ್ ಲೀಡ್ ಮಾಡಿಬಿಟ್ಟರು. ಸಮಯ ಬಂದಾಗ ಎಲ್ಲದ್ದಕ್ಕೂ ನಾನು ಉತ್ತರ ಕೊಡುತ್ತೇನೆ. ನಾನು ಒಂದು ಜವಾಬ್ದಾರಿಯುತ ಸಮುದಾಯದ ನಾಯಕ. ನನ್ನನ್ನು ಇಲ್ಲಿಯವರೆಗೂ ಜನ ಬೆಳೆಸಿದ್ದಾರೆ ಎಂದು ಉಮಾಪತಿ ಮಾತನಾಡಿದ್ದಾರೆ.

‘ಕಾಟೇರ’ ಐಡಿಯಾ ಕೊಟ್ಟಿದ್ದು ದರ್ಶನ್ ಆದರೆ ಅದು ನನ್ನ ಬ್ಯಾನರ್‌ನಲ್ಲಿ ರಿಜಿಸ್ಟರ್ ಆಗಿದ್ದು ಎಂದು ಉಮಾಪತಿ ಮಾತನಾಡಿದ್ದಾರೆ. ಇವತ್ತು ಇವರು ಏನೇ ಹೇಳಬಹುದು ಮುಂದೊಂದು ದಿನ ಸಮಯ ಪಾಠ ಕಲಿಸುತ್ತದೆ. ಜನ ನನಗೆ ಒಳ್ಳೆಯ ಸ್ಥಾನಮಾನ ಕೊಟ್ಟಿದ್ದಾರೆ. ಹೌದು ನಾನು ತಗಡೆ ಆದರೆ ಗುಮ್ಮಿಸಿಕೊಳ್ಳುವವನಲ್ಲ ಎಂದು ದರ್ಶನ್ ಉತ್ತರಕ್ಕೆ ಉಮಾಪತಿ ತಿರುಗೇಟು ನೀಡಿದ್ದಾರೆ. ದರ್ಶನ್ ಪದ ಬಳಕೆ ಮಾಡುವಾಗ ಜೋಪಾನವಾಗಿರಬೇಕು ಎಂದು  ಉತ್ತರ ಕೊಟ್ಟಿದ್ದಾರೆ.

ತರುಣ್ ಸುಧೀರ್ ನಿರ್ದೇಶನದ ‘ಕಾಟೇರ’ (Kaatera) ಸಿನಿಮಾ 50 ದಿನಗಳನ್ನು ಪೂರೈಸಿ ಮುನ್ನುಗ್ಗುತ್ತಿದೆ. ಈ ವೇಳೆ, ಹಿರಿಯ ನಟಿ ಶ್ರುತಿ, ನಾಯಕಿ ಆರಾಧನಾ ಸೇರಿದಂತೆ ತಂಡದ ಹಲವರಿಗೆ ಇಂದು (ಫೆ.20) ಪ್ರಶಸ್ತಿ ನೀಡಿ ಚಿತ್ರತಂಡ ಗೌರವಿಸಿದೆ. ಈ ವೇಳೆ, ಕಾಟೇರ ಟೈಟಲ್ ಕೊಟ್ಟಿದ್ದು ನಾನೇ ಎಂದ ನಿರ್ಮಾಪಕ ಉಮಾಪತಿಗೆ ದರ್ಶನ್ ಟಾಂಗ್ ಕೊಟ್ಟಿದ್ದಾರೆ. ಉಮಾಪತಿ ಆರೋಪಕ್ಕೆಲ್ಲಾ ದರ್ಶನ್ ಸ್ಪಷ್ಟನೆ ನೀಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!