ಹೊಸದಿಗಂತ ವರದಿ,ಮದ್ದೂರು :
ಹಾಡ ಹಗಲೇ ವಿಧವೆಯ ಮನೆಗೆ ನುಗ್ಗಿದ ದುಷ್ಕರ್ಮಿಗಳು ನಗದು ಸೇರಿದಂತೆ ಲಕ್ಷಾಂತರ ರೂ. ವೌಲ್ಯದ ಚಿನ್ನಾಭರಣಗಳನ್ನು ಲೂಟಿ ಮಾಡಿರುವ ಘಟನೆ ಪಟ್ಟಣದ ಎಚ್.ಕೆ. ವೀರಣ್ಣಗೌಡನಗರ (ಚನ್ನೇಗೌಡನದೊಡ್ಡಿ)ಯಲ್ಲಿ ಜರುಗಿದೆ.
ಎಚ್.ಕೆ. ವೀರಣ್ಣಗೌಡ ನಗರದ ಲೇಟ್ ಉಮೇಶ್ ಅವರ ಪತ್ನಿ ಅಂಬಿಕಾ ಅವರ ಮನೆಯ ಬೀಗ ಮುರಿದು ಒಳ ನುಗ್ಗಿರುವ ದುಷ್ಕರ್ಮಿಗಳು ಬೀರುವಿನಲ್ಲಿದ್ದ 40 ಸಾವಿರ ನಗದು ಹಾಗೂ 6 ಲಕ್ಷ ರೂ. ವೌಲ್ಯದ ಚಿನ್ನಾಭರಣಗಳನ್ನು ಲೂಟಿ ಮಾಡಿ ಪರಾರಿಯಾಗಿದ್ದಾರೆ.