August 10, 2026
Monday, August 10, 2026
spot_img

ಗೃಹಲಕ್ಷ್ಮೀ ಹೆಸರಿನಲ್ಲಿ ಎರಡು ಸಾವಿರ ರೂಪಾಯಿ ಕೊಟ್ಟು 10 ಸಾವಿರ ಕಿತ್ಕೋತಿದಾರೆ: ವಿಜಯೇಂದ್ರ ಕಿಡಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಕಾಂಗ್ರೆಸ್‌ ಸರ್ಕಾರ ಹೆಣ್ಣುಮಕ್ಕಳಿಗೆ ಪ್ರತೀ ತಿಂಗಳಿಗೆ ಎರಡು ಸಾವಿರ ರೂಪಾಯಿ ನೀಡಿ ಪ್ರೋತ್ಸಾಹಿಸುತ್ತಿದೆ. ಆದರೆ ಇನ್ನೊಂದು ರೂಪದಲ್ಲಿ ಹತ್ತು ಸಾವಿರ ರೂಪಾಯಿ ಕಿತ್ಕೋತಾಯಿದೆ. ಇದು ಯಾರ ಕಣ್ಣಿಗೂ ಕಾಣುತ್ತಿಲ್ವಾ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಆರೋಪಿಸಿದ್ದಾರೆ.

ಎರಡು ಸಾವಿರ ರೂಪಾಯಿ ಕೊಟ್ಟು ಸಾರಾಯಿ ಹೆಸರಿನಲ್ಲಿ ಹತ್ತು ಸಾವಿರ ರೂಪಾಯಿ ವಸೂಲಿ ಮಾಡ್ತಾಇದೆ. ಗೃಹಲಕ್ಷ್ಮೀ ಹಣ ಎಲ್ಲಿಂದ ಬರ್ತಿದೆ? ಹೆಣ್ಣುಮಕ್ಕಳಿಗೆ ಹಣ ಕೊಡೋಕೆ ಅಬಕಾರಿ ಇಲಾಖೆಗೆ 40 ಸಾವಿರ ಕೋಟಿ ವ್ಯವಹಾರದ ಗುರಿ ನೀಡಿದ್ದಾರೆ ಎಂದು ದೂರಿದರು.

ರಾಜ್ಯದಲ್ಲಿ ಐನೂರು ಮೀಟರ್‌ಗೊಂದು ಮೆಡಿಕಲ್‌ ಶಾಪ್‌ ಇದ್ಯೋ ಇಲ್ವೋ ಗೊತ್ತಿಲ್ಲ ಆದರೆ ಐನೂರು ಮೀಟರ್‌ಗೊಂದು ಎಣ್ಣೆ ಅಂಗಡಿ ಇದೆ. ದಿನಸಿ ಅಂಗಡಿಲೂ ಮದ್ಯ ಮಾರಾಟ ಆಗ್ತಿದೆ. ಹೆಂಡತಿಗೆ ಹಣ ಕೊಡೋಕೆ ಗಂಡನಿಂದ ವಸೂಲಿ ಮಾಡಿದಂತಾಯ್ತು ಎಂದು ಆರೋಪಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !