ಹೊಸದಿಗಂತ ವರದಿ, ಮುಂಡಗೋಡ:
ಹಗಲು ಹೊತ್ತಿನಲ್ಲಿ ಕಳ್ಳರು ಮನೆಯ ಕಿಟಕಿಯಿಂದ ಒಳನುಗ್ಗಿ ಚಿನ್ನಾಭರಣ ಹಾಗೂ ಹಣ ದೋಚಿಕೊಂಡು ಹೋದ ಘಟನೆ ಪಟ್ಟಣದ ಸುಭಾಸನಗರದಲ್ಲಿ ಜರುಗಿದೆ.
ಅರ್ಜುನ ಸಿಂಗ್ ಎಂಬವರ ಮನೆಯ ಕಿಟಕಿ ಮುರಿದು ಒಳ ನುಗ್ಗಿರುವ ಕಳ್ಳರು ಕಬ್ಬಿಣದ ಕಪಾಟನಲ್ಲಿದ್ದ ಹದಿಮೂರು ಗ್ರಾಮ ತೂಕದ ಬಂಗಾರದ ಆಭರಣ ಹಾಗೂ ಐವತ್ತು ಸಾವಿರ ರೂ. ನಗದು ಹಣವನ್ನು ದೋಚಿಕೊಂಡು ಪರಾರಿಯಾಗಿದ್ದಾರೆ. ಘಟನಾ ಸ್ಥಳಕ್ಕೆ ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಆಗಮಿಸಿ ಪರಿಶೀಲನೆ ನಡೆಸಿದ್ದು ಈ ಕುರಿತು ಪೊಲೀಸರು ತನಿಖೆ ಕೈಗೊಂಡಿದ್ದಾರೆ. ನಾನು ಸಣ್ಣ ಫಾಸ್ಟ್ ಪುಂಡ್ ಅಂಗಡಿಯನ್ನು ಇಟ್ಟುಕೊಂಡು ಜೀವನ ಸಾಗಿಸುತ್ತಿದ್ದೇನೆ. ದೀಪಾವಳಿ ಹಬ್ಬಕ್ಕೆಂದು ಬೇರವರ ಹತ್ತಿರ ಹಣವನ್ನು ಸಾಲ ಪಡೆದು ಮನೆಯಲ್ಲಿ ಇಟ್ಟಿದ್ದೆ. ಆದರೆ ಮಂಗಳವಾರ ಆಭರಣದ ಜೊತೆ ಹಣವನ್ನು ಕಳ್ಳರು ಕದ್ದುಕೊಂಡು ಹೋಗಿರುವುದು ಆರ್ಥಿಕ ಸಂಕಷ್ಟಕ್ಕೆ ದುಡುವಂತಾಗಿದೆ ಎಂದು ತಮ್ಮ ಅಳಲನ್ನು ತೋಡಿಕೊಂಡು.
ಇತ್ತೀಚೆಗೆ ಪಟ್ಟಣದ ಅನ್ನಪೂರ್ಣೇಶ್ವರಿ ನಗರದಲ್ಲಿ ಜಿ.ಪಂ ಸದಸ್ಯೆ ಶಾಮಲಾ ಕುರಿಯವರ ಅವರ ಮನೆ ಕಳ್ಳತನ ಮಾಡಲು ಯತ್ನಿಸಿದಾಗ ಮನೆಯವರು ಬಂದ ತಕ್ಷಣವೇ ಆರೋಪಿಗಳನ್ನು ಕಳ್ಳತನ ಮಾಡಿದ್ದ ಬೆಳ್ಳಿ ಆಭರಣಗಳನ್ನು Uಹಾಗೂ ಬ್ಯಾಗ ಸಹೀತ ಬಿಟ್ಟು ಪರಾರಿಯಾಗಿದ್ದರು. ಪೊಲೀಸರು ಕರ್ಳಲರ ವಾಹನ ಬೆನ್ನಟಿದರು ತಪ್ಪಿಸಿಕೊಂಡು ಪರಾರಿ ಯಾಗಿದ್ದರು. ಪರಾರಿಯಾಗಿದ್ದ ಕಾರು ಶಿಗ್ಗಾಂವಬಿಯಲ್ಲಿ ಪತ್ತೆಯಾಗಿದೆ ಎನ್ನಲಾಗಿದೆ. ಈ ಬಗ್ಗೆ ತೀವ್ರ ತನಿಖೆ ಕೈಗೊಂಡಿದ್ದಾರೆ.