ಹೊಸದಿಗಂತ ವರದಿ ಮುಂಡಗೋಡ:
ಸರಕಾರಿ ಆಸ್ಪತ್ರೆಯ ಆರೋಗ್ಯಧಿಕಾರಿ ಕಾರ್ಯಾಲಯದ ಪಕ್ಕದಲ್ಲಿದ್ದ ಎರಡು ಗಂಧದ ಮರಗಳನ್ನು ಮರಗಳ್ಳರು ಕಡಿದು ತುಂಡುಗಳನ್ನು ಮಾಡಿ ಟೊಂಗೆಗಳನ್ನು ಸ್ಥಳದಲ್ಲಿಯೇ ಬಿಟ್ಟು ಪರಾರಿಯಾದ ಘಟನೆ ಶನಿವಾರ ನಡೆದಿದೆ.
ಆರೋಗ್ಯಧಿಕಾರಿ ಕಾರ್ಯಾಲಯದ ಪಕ್ಕದಲ್ಲಿ ಒಂದು ಮತ್ತು ವಸತಿ ಗೃಹ ದಲ್ಲಿ ಒಂದು ಗಂಧದ ಮರ ಕಡೆದಿದ್ದಾರೆ. ಸುಮಾರು ಹನ್ನೆರಡು ರಿಂದ ಹದಿನೈದು ವರ್ಷದ ಮರಗಳಾಗಿದ್ದವು. ಇದು ಶನಿವಾರ ಬೆಳಿಗ್ಗೆ ಬೆಳಕಿಗೆ ಬಂದಿದೆ. ಜನ ವಸತಿಯಲ್ಲಿದ್ದ ಎರಡು ಮರಗಳನ್ನು ಮರಗಳ್ಳರು ಕಡಿದು ಟೊಂಗೆಗಳನ್ನು ಅಲ್ಲಿ ಬಿಟ್ಟಿದ್ದು ಸಂಶಯಗೆ ಎಡೆಮಾಡಿಕೊಟ್ಟಿದೆ. ಅರಣ್ಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.
ವಾಗೀಶ., ಮುಂಡಗೋಡ ವಲಯ ಅರಣ್ಯಧಿಕಾರಿ: ತಾಲೂಕು ಆಸ್ಪತ್ರೆಯ ಆವರಣದಲ್ಲಿದ್ದ ಗಂಧದ ಮರಗಳನ್ನು ಕಡೆದಿರುವ ಬಗ್ಗೆ ಇಂದು ಬೆಳಿಗ್ಗೆ ಮಾಹಿತಿ ತಿಳಿಯಿತು.ತಕ್ಷಣವೇ ನಮ್ಮ ಸಿಬ್ಬಂದಿಗಳನ್ನು ಸ್ಥಳಕ್ಕೆ ಕಳುಹಿಸಿ ಮಾಹಿತಿ ಕಲೆಹಾಕಿದ್ದಾರೆ. ಹನ್ನೆರಡು ರಿಂದ ಹದಿನೈದು ವರ್ಷದ ಗಂಧದ ಮರವಾಗಿದ್ದವು ಎಂದು ಸಿಬ್ಬಂದಿಗಳು ತಿಳಿಸಿದ್ದಾರೆ. ಅಕ್ಕ-ಪಕ್ಕದ ಸಿಸಿ ಕ್ಯಾಮೆರಾಗಳ ಮಾಹಿತಿಗಳನ್ನು ಕಲೆ ಹಾಕುತ್ತಿದ್ದೇವೆ.