ASIAN GAMES| ಪುರುಷರ ಬ್ಯಾಡ್ಮಿಂಟನ್ ಡಬಲ್ಸ್‌ನಲ್ಲಿ ಭಾರತಕ್ಕೆ ಚಿನ್ನದ ಗರಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಏಷ್ಯನ್‌ ಗೇಮ್ಸ್‌ನಲ್ಲಿ ಭಾರತಕ್ಕೆ ಈವರೆಗೆ 100 ಪದಕಗಳು ಸಂದಿದ್ದು, ಭಾರತವು ಶತಕದ ಸಂಭ್ರಮದಲ್ಲಿದೆ. ಭಾರತದ ಪದಕದ ಬೇಟೆ ಮುಂದುವರೆದಿದ್ದು, ಚಿರಾಗ್‌ ಶೆಟ್ಟಿ-ಸಾತ್ವಿಕ್‌ ಸಾಯಿರಾಜ್‌ ರಾಂಕಿರೆಡ್ಡಿ ಜೋಡಿ
ಏಷ್ಯನ್​ ಗೇಮ್ಸ್​ನಲ್ಲಿ ಐತಿಹಾಸಿಕ ಪದಕ ಗೆದ್ದಿದ್ದಾರೆ.

ಶನಿವಾರ ನಡೆದ ಡಬಲ್ಸ್​ ಬ್ಯಾಡ್ಮಿಂಟನ್​ ಫೈನಲ್‌ನಲ್ಲಿ ದ.ಕೊರಿಯಾದ ಚೊಯಿ ಸೊಲ್ಯು-ಕಿಮ್‌ ವೊನ್ಹೊ ಜೋಡಿಯನ್ನು 21-18, 21-16 ಗೇಮ್‌ಗಳಲ್ಲಿ ಮಣಿಸಿ ಚಿನ್ನಕ್ಕೆ ಕೊರಳೊಡ್ಡಿದ್ದಾರೆ.

ಈ ಮೂಲಕ ಭಾರತದಲ್ಲಿ ಮೊದಲ ಬಾರಿಗೆ ಜೋಡಿ ಸಾಧನೆ ಮಾಡಿರುವುದು ಎಂಬ ಹೆಗ್ಗಳಿಕೆಗೆ ಚಿರಾಗ್‌-ಸಾತ್ವಿಕ್‌ ಪಾತ್ರರಾಗಿದ್ದಾರೆ. ಅಲ್ಲದೆ ಈ ಪದಕದೊಂದಿಗೆ ಭಾರತವು 100ರ ಪದಕದ ಗಡಿ ದಾಟಿದೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!