ಬೆಂಗಳೂರಿನಲ್ಲಿ ಕಳ್ಳರ ಹಾವಳಿ, ಉದ್ಯಮಿ ಮನೆಯಲ್ಲಿ ಕೋಟಿಯಷ್ಟು ಬೆಲೆಬಾಳುವ ಗೋಲ್ಡ್‌ ಕಳವು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಕೆಲಸದಿಂದ ವಜಾಗೊಳಿಸಿದ್ದಕ್ಕೆ ಮಾಲೀಕನ ಮನೆಯಿಂದ 1.09 ಕೋಟಿ ಮೌಲ್ಯದ ಚಿನ್ನಾಭರಣ ಕದ್ದಿದ್ದ ಆರೋಪಿ ಹಾಗೂ ಆತನ ಇಬ್ಬರು ಸಹಚರರನ್ನು ಸುಬ್ರಹ್ಮಣ್ಯ ನಗರ ಠಾಣೆ ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ.

ಬಂಧಿತರನ್ನು ಪ್ರಮುಖ ಆರೋಪಿ ಸನ್ಯಾಸಿ ಮಠ ನಂದೀಶ್, ಹೆಚ್.ಎಂ.ನಂದೀಶ್ ಹಾಗೂ ಪ್ರತಾಪ್ ಕುಮಾರ್ ಎಂದು ಗುರುತಿಸಲಾಗಿದೆ. ಈ ಕೃತ್ಯದಲ್ಲಿ ತಲೆಮರೆಸಿಕೊಂಡಿರುವ ಮತ್ತೊಬ್ಬ ಆರೋಪಿ ಹನುಮೇಗೌಡ ಪತ್ತೆಗೆ ಹುಡುಕಾಟ ಮುಂದುವರೆದಿದೆ.

ಆರೋಪಿಗಳಿಂದ 1.8 ಕೆಜಿ ಚಿನ್ನಾಭರಣ ಹಾಗೂ 18,000 ರೂ ಹಣ ಸೇರಿ ಒಟ್ಟು 1.09 ಕೋಟಿ ಮೌಲ್ಯದ ವಸ್ತುಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.

ಮಾರುತಿ ಎಕ್ಸ್‌ಟೆನ್ಶನ್‌ನ 3ನೇ ಮುಖ್ಯ ರಸ್ತೆಯಲ್ಲಿರುವ ಆಭರಣ ವ್ಯಾಪಾರಿ ಭಾಸ್ಕರ್ ಅವರ ಮನೆಯಲ್ಲಿ ಸೆಪ್ಟೆಂಬರ್ 21 ರಂದು ಕಳ್ಳತನ ನಡೆದಿತ್ತು. ಭಾಸ್ಕರ್ ಅವರು ಸುಬ್ರಹ್ಮಣ್ಯನಗರದಲ್ಲಿ ಆಭರಣ ಮಳಿಗೆ ಹೊಂದಿದ್ದು, ಕುಟುಂಬದೊಂದಿಗೆ ಮಂತ್ರಾಲಯಕ್ಕೆ ಹೋಗಿದ್ದಾಗ ಮನೆಯಲ್ಲಿ ಕಳ್ಳತನವಾಗಿದೆ ಎಂದು ಪೊಲೀಸರಿಗೆ ದೂರು ನೀಡಿದ್ದರು. ಅಲ್ಲದೆ, ತಮ್ಮ ಬಳಿ ಕೆಲಸಕ್ಕಿದ್ದವರ ಮಾಹಿತಿಯನ್ನು ಪೊಲೀಸರಿಗೆ ನೀಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!