ಬಾರ್&ರೆಸ್ಟೋರೆಂಟ್‌ಗೆ ನುಗ್ಗಿದ ಕಳ್ಳರು: ಲಕ್ಷಾಂತರ ಹಣ, ಮದ್ಯ ಕಳವು

ದಿಗಂತ ವರದಿ ಅಂಕೋಲಾ:

ಪಟ್ಟಣದಲ್ಲಿ ರಾಷ್ಟ್ರೀಯ ಹೆದ್ದಾರಿ 66 ಕ್ಕೆ ಹೊಂದಿಕೊಂಡಿರುವ ಪಿಕಾಕ್ ಬಾರ್ ಎಂಡ್ ರೆಸ್ಟೋರೆಂಟ್ ಗೆ ನುಗ್ಗಿದ ಕಳ್ಳರು ಲಕ್ಷಾಂತರ ರೂಪಾಯಿ ನಗದು ಮತ್ತು ಮದ್ಯದ ಬಾಕ್ಸುಗಳನ್ನು ಕಳುವು ಮಾಡಿರುವ ಘಟನೆ ಮಂಗಳವಾರ ಬೆಳಗ್ಗಿನ ಜಾವ 2 ಗಂಟೆಗೆ ಸಂಭವಿಸಿದೆ.
ಸೋಮವಾರ ರಾತ್ರಿ ವ್ಯವಹಾರ ಮುಗಿಸಿ ಸಿಬ್ಬಂದಿಗಳು ಮೇಲಿನ ಮಹಡಿಯಲ್ಲಿರುವ ಕೋಣೆಯಲ್ಲಿ ಮಲಗಿದ ನಂತರ ರೆಸ್ಟೋರೆಂಟ್ ನ ಹಿಂಬದಿಯಲ್ಲಿ ಇರುವ ಶೆಡ್ಡಿನ ಬಾಗಿಲಿಗೆ ಇರುವ ಜಾಳಿಗೆಯನ್ನು ಸರಿಸಿ, ಇನ್ನೊಂದು ಬಾಗಿಲ ಚಿಲಕ ಮುರಿದು ಕಳ್ಳರು ಒಳ ಪ್ರವೇಶಿಸಿದಂತೆ ಕಂಡು ಬರುತ್ತಿದ್ದು ನಗದು ಇಡುವ ಕೌಂಟರ್ ಬಳಿ ಬಂದು ಗಲ್ಲಾ ಪೆಟ್ಟಿಗೆ ತಡಕಾಡಿ ನಗದು ಕಳ್ಳತನ ಮಾಡಿದ್ದಾರೆ ನಂತರ ಮದ್ಯದ ಬಾಕ್ಸುಗಳನ್ನು ಸಂಗ್ರಹಿಸಿಟ್ಟ ಕೋಣೆಗೆ ನುಗ್ಗಿ ಕೆಲವು ಬಾಕ್ಸುಗಳನ್ನು ಕದ್ದೊಯ್ದಿರುವುದಾಗಿ ತಿಳಿದು ಬಂದಿದೆ.
ಇಬ್ಬರು ಮುಸುಕುದಾರಿಗಳು ಒಳ ಪ್ರವೇಶಿಸಿರುವುದು ಸಿ.ಸಿ. ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಹೊರಗಿನಿಂದ ಬಂದವರಿಂದ ಈ ಕೃತ್ಯ ನಡೆದಿದೆಯೇ? ಅಥವಾ ಸ್ಥಳೀಯರ ಕೃತ್ಯವೇ?ಪ್ರತಿದಿನದ ವ್ಯವಹಾರ ತಿಳಿದವರ ಕೈವಾಡವಿದೆಯೋ ಎಂದು ತಿಳಿದು ಬರಬೇಕಿದೆ.
ಆರಕ್ಷಕ ಇಲಾಖೆಯ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಬೆರಳಚ್ಚು ತಜ್ಞರು, ಶ್ವಾನದಳ ಸ್ಥಳಕ್ಕೆ ಭೇಟಿ ನೀಡಿದ್ದು ಶ್ವಾನ ದಳ ರೆಸ್ಟೋರೆಂಟ್ ನಿಂದ ಹೊನ್ನಾರಾಕಾ ದೇವಾಲಯದ ಎದುರಿನ ಅಂಡರ್ ಪಾಸ್ ವರೆಗೆ ಹೋಗಿ ಮರಳಿ ರೆಸ್ಟೋರೆಂಟ್ ಬಳಿ ಬಂದು ನಿಂತಿರುವುದಾಗಿ ತಿಳಿದು ಬಂದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!