ದೇಶದಲ್ಲೇ ಮೊದಲ ಬಾರಿಗೆ ತೃತೀಯಲಿಂಗಿ​ ಗರ್ಭಧಾರಣೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೇಶದಲ್ಲೇ ಮೊದಲ ಬಾರಿಗೆ ತೃತೀಯಲಿಂಗಿ​ ಗರ್ಭ ಧರಿಸಿರುವ (Transman Pregnancy) ಘಟನೆಯೊಂದು ಕೇರಳದಲ್ಲಿ ನಡೆದಿದೆ.

ಈ ಹಿಂದೆ ಗರ್ಭಧಾರಣೆ ಎಂಬುದು ಹೆಣ್ಣು ಮಾತ್ರ ಈ ಭಾಗ್ಯವನ್ನು ಪಡೆದಿರುತ್ತಾಳೆ. ಆದರೆ ಈಗ ತಂತ್ರಜ್ಞಾನ ಮುಂದುವರಿಕೆಯಿಂದ ಯಾರು ಬೇಕಾದರೂ ಗರ್ಭಧಾರಣೆ ಮಾಡಿಸಿಕೊಳ್ಳಬಹುದು. ಜಗತ್ತಿನಲ್ಲಿ ಇಂತಹ ಅನೇಕ ಚಿತ್ರ- ವಿಚಿತ್ರ ಘಟನೆಗಳು ನಡೆಯುತ್ತಿರುತ್ತದೆ. ಇದೀಗ ಇಂತಹದೇ ಒಂದ ಘಟನೆ ಭಾರತದಲ್ಲೂ ನಡೆದಿದೆ.

ಮಂಗಳಮುಖಿ ಅಂದರೆ ಸಮಾಜದಲ್ಲಿ ಬೇರೆ ರೀತಿಯಲ್ಲೇ ನೋಡುತ್ತಾರೆ. ಅವರಿಗೂ ಕೂಡ ಒಂದು ಸುಂದರ ಜೀವನ ಇದೆ, ಅವರು ಕೂಡ ಈ ಸಮಾಜದಲ್ಲಿ ಎಲ್ಲರಂತೆ ಸಮಾನವಾಗಿ ಬದುಕಬಹುದು. ಎಲ್ಲರೂ ಬದುಕು ಮತ್ತು ತಮ್ಮ ಸ್ವತ ಜಗತ್ತನ್ನು ಸೃಷ್ಟಿಸಿಕೊಳ್ಳವ ಹಕ್ಕು ಇದೆ. ಇದೀಗ ದೇಶದ ಮೊದಲ ಟ್ರ್ಯಾನ್ಸ್​ಜೆಂಡರ್​ ಗರ್ಭಧಾರಣೆ (Transman Pregnancy) ಪಡೆದಿದ್ದಾರೆ. ಅಂದರೆ ಮೊದಲ ಬಾರಿಗೆ ದೇಶದಲ್ಲಿ ಮಂಗಳಮುಖಿಯರು ಗರ್ಭಧಾರಣೆ ಮಾಡಿಕೊಂಡು, ಫೋಟೋ ಶೂಟ್ ಮಾಡಿಕೊಂಡಿದ್ದಾರೆ. ಜಿಯಾ ಪಾವಲ್ ಅವರು ಪುರುಷ ಸಂಗಾತಿಯ ಮೆಟರ್ನಿಟಿ ಫೋಟೋಶೂಟ್ ಚಿತ್ರಗಳನ್ನು ಇನ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.

ಆಹದ್ ಫಾಜಿಲ್ ಮತ್ತು ಜಿಯಾ ಪಾವಲ್ ದಂಪತಿಯ ಪುರುಷ ಸಂಗಾತಿ ಜಹದ್ ಫಾಜಿಲ್ ಅವರು ಮಗುವಿಗೆ ಜನ್ಮ ನೀಡಲಿದ್ದಾರೆ. ಎಂಟು ತಿಂಗಳ ಗರ್ಭಿಣಿಯಾಗಿರುವ ಜಹಾದ್ ಅವರು ತಮ್ಮ ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ದಂಪತಿಗಳ ಮೆಟರ್ನಿಟಿಯ ಫೋಟೋಶೂಟ್ ಚಿತ್ರಗಳನ್ನು ಭಾವನಾತ್ಮಕ ಶೀರ್ಷಿಕೆಯಡಿಯಲ್ಲಿ ಜಿಯಾ ಪಾವಲ್ ತಮ್ಮ ಇನ್ಟಾಗ್ರಾಮ್ ಪೋಸ್ಟ್ ಮಾಡಿಕೊಂಡಿದ್ದಾರೆ. ಇದು ಈಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!