ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶದ ಸಾರ್ವತ್ರಿಕ ಚುನಾವಣೆಯ ಮೂರನೇ ಹಂತದಲ್ಲಿ (2024 ಲೋಕಸಭೆ ಚುನಾವಣೆ) ಇಂದು 11 ರಾಜ್ಯಗಳ 92 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ.
ಕರ್ನಾಟಕದ 14 ಜಿಲ್ಲೆಗಳು ಸೇರಿದಂತೆ ಒಟ್ಟು 92 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ಮೂರನೇ ಹಂತದ ಚುನಾವಣೆಗೆ ಚುನಾವಣಾ ಆಯೋಗ ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡಿದೆ.
ಒಟ್ಟು 1,300 ಅಭ್ಯರ್ಥಿಗಳು ಕಣದಲ್ಲಿದ್ದಾರೆ. 1.85 ಮಿಲಿಯನ್ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ ಮತ್ತು 18.5 ಮಿಲಿಯನ್ ಚುನಾವಣಾ ಏಜೆಂಟ್ಗಳನ್ನು ನಿಯೋಜಿಸಲಾಗಿದೆ.
ಯಾವ ರಾಜ್ಯಗಳಲ್ಲಿ ಎಷ್ಟು ಕ್ಷೇತ್ರಗಳಲ್ಲಿ ಮತದಾನ?
ಅಸ್ಸಾಂ – 4
ಬಿಹಾರ್ – 5
ಛತ್ತೀಸ್ಗಢ – 7
ಗೋವಾ-2
ಗುಜರಾತ್ – 26
ಕರ್ನಾಟಕ – 14
ಮಧ್ಯಪ್ರದೇಶ – 8+1
ಮಹಾರಾಷ್ಟ್ರ -11
ಉತ್ತರ ಪ್ರದೇಶ – 10
ಪಶ್ಚಿಮ ಬಂಗಾಳ – 4
ದಾದ್ರಾ ಮತ್ತು ಹವೇಲಿ ಹಾಗೂ ದಮನ್ ಮತ್ತು ದಿಯು ಎಂಬ ಎರಡು ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ.