ಮೂರನೇ ಹಂತದ ಮತದಾನ ಮುಕ್ತಾಯ: ದೇಶದಲ್ಲಿ ಶೇ.60ರಷ್ಟು ವೋಟಿಂಗ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ದೇಶದ 11 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶದಲ್ಲಿ ಲೋಕಸಭೆ ಚುನಾವಣೆಯ ಮೂರನೇ ಹಂತದ ಮತದಾನವು ಬಹುತೇಕ ಶಾಂತಿಯುತವಾಗಿ ನಡೆದಿದೆ. ಕರ್ನಾಟಕದ 14 ಸೇರಿ ಒಟ್ಟು 93 ಲೋಕಸಭೆ ಕ್ಷೇತ್ರಗಳಲ್ಲಿ ಮಂಗಳವಾರ (ಮೇ 7) ಸಂಜೆ 5 ಗಂಟೆ ಸುಮಾರಿಗೆ ಶೇ.60.19ರಷ್ಟು ಮತದಾನ ದಾಖಲಾಗಿದೆ.

2019ರ ಲೋಕಸಭೆ ಚುನಾವಣೆಯ 3ನೇ ಹಂತದ ಮತದಾನದ ವೇಳೆ ಶೇ.68.40ರಷ್ಟು ಮತದಾನ ನಡೆದಿತ್ತು. ಮಂಗಳವಾರ ಇನ್ನೂ ಒಂದು ಗಂಟೆಯ ಮತದಾನದ ಅಂಕಿ-ಅಂಶ ಲಭ್ಯವಾಗಬೇಕಿದೆ.

ಕರ್ನಾಟಕದ 14, ಗುಜರಾತ್‌ನ 26, ಮಹಾರಾಷ್ಟ್ರ 11, ಉತ್ತರ ಪ್ರದೇಶ 10, ಮಧ್ಯಪ್ರದೇಶ 8 ಸೇರಿ ಒಟ್ಟು 93 ಕ್ಷೇತ್ರಗಳಲ್ಲಿ ಮೂರನೇ ಹಂತದ ಮತದಾನ ಮುಕ್ತಾಯಗೊಂಡಿದೆ. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಎನ್‌ಸಿಪಿ ನಾಯಕ ಅಜಿತ್‌ ಪವಾರ್‌, ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್‌ ಯಾದವ್‌ ಸೇರಿ ಹಲವು ಗಣ್ಯರು ಮತದಾನ ಮಾಡಿದರು. ಪಶ್ಚಿಮ ಬಂಗಾಳ ಸೇರಿ ಕೆಲವಡೆ ಮಾತ್ರ ಸಣ್ಣಪುಟ್ಟ ಹಿಂಸಾಚಾರಗಳು ನಡೆದಿವೆ.

ಪ್ರಮುಖ ರಾಜ್ಯಗಳಲ್ಲಿ ಮತದಾನ ಪ್ರಮಾಣ
ಕರ್ನಾಟಕ 66.05%
ಪಶ್ಚಿಮ ಬಂಗಾಳ 73.93%
ಅಸ್ಸಾಂ 75.01%
ಮಹಾರಾಷ್ಟ್ರ 53.4%
ಗುಜರಾತ್ ‌55.22
ಬಿಹಾರ 56%
ಉತ್ತರ ಪ್ರದೇಶ 55.13
ಮಧ್ಯಪ್ರದೇಶ 62.28

ದೇಶದ ಹಲವೆಡೆ ಮೊದಲ ಹಂತದಲ್ಲಿ ನಡೆದ ಮತದಾನ ಪ್ರಮಾಣವು ಶೇ.66.14ರಷ್ಟಿದ್ದರೆ, ಎರಡನೇ ಹಂತದಲ್ಲಿ ಶೇ.66.71ರಷ್ಟು ಮತದಾನ ದಾಖಲಾಗಿತ್ತು. ಇದು ಕೂಡ 2019ರ ಲೋಕಸಭೆ ಚುನಾವಣೆಗಿಂತ ಕಡಿಮೆ ಪ್ರಮಾಣದ ಮತದಾನವಾಗಿದೆ ಎಂದು ತಿಳಿದುಬಂದಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!