ಪೂರ್ವಜರ ಕಾಣುವ ಹಂಬಲದಲ್ಲಿ 75 ವರ್ಷಗಳ ಬಳಿಕ ಬಂದರು ಈ 90ರ ವೃದ್ಧೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:
ದೇಶವಿಭಜನೆಯ ನಂತರ ಭಾರತಕ್ಕೆ ಬಂದು ನೆಲೆಸಿದ್ದ ಒಬ್ಬ 90 ವರ್ಷದ ವೃದ್ಧೆಯೊಬ್ಬರು ತನ್ನ ಪೂರ್ವಜನರನ್ನು ಭೇಟಿ ಮಾಡಲು, ಭಾರತಕ್ಕೆ ಬಂದ 75 ವರ್ಷಗಳ ನಂತರ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದಾರೆ. ವಿಭಜನೆಯ ಭೀಕರತೆಯ ನಡುವೆ ಭಾರತಕ್ಕೆ ಡಿ ಬಂದಿದ್ದ ಆಕೆಗೆ ಆಗಿನ್ನೂ ಕೇವಲ 25 ವರ್ಷ ವಯಸ್ಸಾಗಿತ್ತು, ಇದೀಗ ತಮ್ಮ 90ನೇ ವಯಸ್ಸಿನಲ್ಲಿ ಮತ್ತೆ ತಮ್ಮ ಪೂರ್ವಜರ ಮನೆಗೆ ಭೇಟಿ ನೀಡಿದ್ದಾರೆ.

ಪಾಕಿಸ್ತಾನ ಸರ್ಕಾರವು ಅವರಿಗೆ ವೀಸಾವನ್ನು ನೀಡಿದ್ದು, ರಾವಲ್ಪಿಂಡಿಯಲ್ಲಿರುವ ತಮ್ಮ ಪೂರ್ವಜರ ಮನೆಗೆ ಭೇಟಿಯಿತ್ತ ಆಕೆಯ ಹೆಸರು ರೀನಾ ಛಿಬ್ಬರ್‌ ವರ್ಮಾ. ಪ್ರಸ್ತುತ ಪುಣೆಯಲ್ಲಿ ನೆಲೆಸಿರುವ ಅವರು ಪ್ರಸ್ತುತ ಪಾಕಿಸ್ತಾನದಲ್ಲಿರುವ ತಮ್ಮ ಬಾಲ್ಯದ ಸಿಹಿ ನೆನಪುಗಳನ್ನು ಕಳೆದ ಪ್ರದೇಶಗಳಿಗೆ ಪುನಃ ಬೇಟಿಯಿತ್ತಿದ್ದಾರೆ. ತನ್ನ ತವರಾದ ರಾವಲ್ಪಿಂಡಿಗೆ ತೆರಳಿದ ರೀನಾ ಅವರು ತನ್ನ ಪೂರ್ವಜರ ನಿವಾಸ ಪ್ರೇಮ್ ನಿವಾಸ್, ಹಾಗೇ ಅವರ ಶಾಲೆ ಮತ್ತು ಬಾಲ್ಯದ ಸ್ನೇಹಿತರನ್ನು ಭೇಟಿ ಮಾಡಿದ್ದಾರೆ. ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಅಪ್ಲೋಡ್‌ ಮಾಡಿದ ವಿಡಿಯೋವೊಂದರಲ್ಲಿ ವಿಭಜನೆಯಾದಾಗ ಅವರ ಕುಟುಂಬ ರಾವಲ್ಪಿಂಡಿಯ ದೇವಿ ಕಾಲೇಜು ರಸ್ತೆಯಲ್ಲಿ ವಾಸಿಸುತ್ತಿತ್ತು ಎಂದು ಹಂಚಿಕೊಂಡಿದ್ದಾರೆ.

“ನಾನು ಮಾಡರ್ನ್ ಸ್ಕೂಲ್ ನಲ್ಲಿ ಓದಿದೆ. ನನ್ನ ನಾಲ್ವರು ಒಡಹುಟ್ಟಿದವರೂ ಅದೇ ಶಾಲೆಗೆ ಹೋಗಿದ್ದರು. ನನ್ನ ಸಹೋದರ ಮತ್ತು ಸಹೋದರಿ ಕೂಡ ಮಾಡರ್ನ್ ಸ್ಕೂಲ್ ಬಳಿ ಇರುವ ಗಾರ್ಡನ್ ಕಾಲೇಜಿನಲ್ಲಿ ಓದುತ್ತಿದ್ದರು” ಎಂದು ರೀನಾ ನೆನಪಿಸಿಕೊಳ್ಳುತ್ತಾರೆ.

““ನನ್ನ ತಂದೆ ಪ್ರಗತಿಪರ ಚಿಂತನೆಯ ವ್ಯಕ್ತಿಯಾಗಿರುವುದರಿಂದ ಮತ್ತು ಹುಡುಗ ಹುಡುಗಿಯರನ್ನು ಭೇಟಿ ಮಾಡುವ ಯಾವುದೇ ಸಮಸ್ಯೆಯಿಲ್ಲದ ಕಾರಣ ನನ್ನ ಅಣ್ಣ ತಮ್ಮಂದಿರಿಗೆ ನಮ್ಮ ಮನೆಗೆ ಬರುತ್ತಿದ್ದ ಮುಸ್ಲಿಂ ಸ್ನೇಹಿತರಿದ್ದರು. ವಿಭಜನೆಯ ಮೊದಲು ಹಿಂದೂ ಮತ್ತು ಮುಸ್ಲಿಂ ಸಮಸ್ಯೆ ಇರಲಿಲ್ಲ. ಆದರೆ ವಿಭಜನೆಯ ನಂತರ ಈ ಸಮಸ್ಯೆ ತಲೆದೂರಿದೆ. ಭಾರತದ ವಿಭಜನೆಯು ತಪ್ಪಾಗಿದ್ದರೂ ಅದು ಸಂಭವಿಸಿದೆ. ನಮ್ಮಂಥವರಿಗೆ ವೀಸಾ ನಿರ್ಬಂಧಗಳನ್ನು ಸರಾಗಗೊಳಿಸಲು ಎರಡೂ ದೇಶಗಳು ಒಟ್ಟಾಗಿ ಕೆಲಸ ಮಾಡಬೇಕು” ಎನ್ನುತ್ತಾರೆ ರೀನಾ ಛೀಬ್ಬರ್.‌

ಅವರು 1965ರಲ್ಲಿಯೇ ಪಾಕಿಸ್ತಾನಿ ವೀಸಾಕ್ಕೆ ಅರ್ಜಿ ಸಲ್ಲಿಸಿದ್ದರು ಆದರೆ ಯುದ್ಧದ ಕಾರಣದಿಂದಾಗಿ ಎರಡು ನೆರೆಹೊರೆಯವರ ನಡುವೆ ಉದ್ವಿಗ್ನತೆ ಹೆಚ್ಚಿದ್ದರಿಂದ ಅದನ್ನು ಪಡೆಯಲು ವಿಫಲರಾಗಿದ್ದರು. ಆದರೀಗ ಸದ್ಭಾವನೆಯ ಸೂಚಕದಲ್ಲಿ ಭಾರತದಲ್ಲಿನ ಪಾಕಿಸ್ತಾನ ಹೈಕಮಿಷನ್ ಮೂರು ತಿಂಗಳ ವೀಸಾವನ್ನು ನೀಡಿದೆ. ಕೊನೆಗೂ ಪೂರ್ವಜರನ್ನು ಭೇಟಿ ಮಾಡುವ 75 ವರ್ಷಗಳ ಅವರ ಕನಸು ಸಾಕಾರಗೊಂಡಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!