ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಲಿವುಡ್ ನಟ ವಿಜಯ್ ದಳಪತಿ ಮತ್ತು ಸಂಗೀತಾ ದಾಂಪತ್ಯ ಜೀವನದಲ್ಲಿ ಎಲ್ಲವು ಸರಿಯಿಲ್ಲ ಎಂಬ ಸುದ್ದಿ ಹರಿದಾಡುತ್ತಿದ್ದು, ಇದರ ನಡುವೆ ರಶ್ಮಿಕಾ ಮಂದಣ್ಣ ಹೆಸರು ಸೇರಿಕೊಂಡಿದೆ .
ಅದೇನೆಂದರೆ ವಿಜಯ್ ದಾಂಪತ್ಯ ಕಲಹಕ್ಕೆ ರಶ್ಮಿಕಾ ಕಾರಣ ಎಂದು.
ವಿಜಯ್ ದಳಪತಿ ದಾಂಪತ್ಯ ಚೆನ್ನಾಗಿಲ್ಲ ಎಂಬ ಸುದ್ದಿ ಕಳೆದ ಕೆಲವು ದಿನಗಳಿಂದ ಸಿನಿಮಾ ನಗರಿಯಲ್ಲಿ ಹಾಟ್ ಟಾಪಿಕ್ ಆಗಿದೆ. ಮೂಲಗಳ ಪ್ರಕಾರ, ವಿಜಯ್, ಸಂಗೀತಾ ಈಗಾಗಲೇ ಡಿವೋರ್ಸ್ ಪಡೆದಿದ್ದಾರೆ ಎನ್ನಲಾಗುತ್ತಿದೆ. ಈ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿರುವ ಬೆನ್ನಲ್ಲೇ ಈ ಸಮಸ್ಯೆಗೆ ರಶ್ಮಿಕಾ ಮಂದಣ್ಣನೇ ಕಾರಣ ಅಂತಾ ನೆಟ್ಟಿಗರು ದೂರುತ್ತಿದ್ದಾರೆ.
ಆಕೆ ಕಾಲಿಟ್ಟ ಕಡೆಯೆಲ್ಲ ಸಮಸ್ಯೆನೇ ಐರೆನ್ ಲೆಗ್ ನಟಿ ಎಂದು ರನೆಟ್ಟಿಗರು ಕಿಡಿಕಾರುತ್ತಿದ್ದಾರೆ.
`ವಾರಿಸು’ ಸಿನಿಮಾದಲ್ಲಿ ವಿಜಯ್‌ಗೆ ನಾಯಕಿಯಾಗಿ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ. ಸದ್ಯದಲ್ಲೇ ಸಿನಿಮಾ ತೆರೆಗೆ ಅಪ್ಪಳಿಸಲಿದೆ. ಸಿನಿಮಾ ಮಧ್ಯೆ ರಶ್ಮಿಕಾ ಬಗೆಗಿನ ಚರ್ಚೆ ಕೂಡ ಜಾಸ್ತಿಯಾಗುತ್ತಿದೆ. 80% ಅಷ್ಟು ಜನರು ರಶ್ಮಿಕಾನೇ ಕಾರಣ ಎಂದು ಹೇಳುತ್ತಿದ್ದಾರೆ.