ಹೊಸದಿಗಂತ ಡಿಜಿಟಲ್ ಡೆಸ್ಕ್:
ಸೂರ್ಯಕುಮಾರ್ ಯಾದವ್ ಸ್ಫೋಟಕ ಶತಕದ ಮೂಲಕ ಟೀಮ್ ಇಂಡಿಯಾ ಕೊನೆಯ ಸರಣಿಯಲ್ಲಿ ಬೃಹತ್ ಮೊತ್ತ ಕಲೆ ಹಾಕಿದೆ.
ಯಾದವ್ ಸೆಂಚುರಿ, ಅಕ್ಸರ್ ಪಟೇಲ್ ಹಾಗೂ ರಾಹುಲ್ ತ್ರಿಪಾಠಿ, ಗಿಲ್ ಉತ್ತಮ ಬ್ಯಾಟಿಂಗ್ ನೆರವಿನಿಂದ ಭಾರತ 5 ವಿಕೆಟ್ ನಷ್ಟಕ್ಕೆ 228 ರನ್ ಸಿಡಿಸಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಇಂಡಿಯಾಕ್ಕೆ ಮೊದಲ ಓವರ್ನಲ್ಲೇ ಇಶಾನ್ ಕಿಶನ್ ಔಟ್ ಆಗಿ ಶಾಕ್ ನೀಡಿದರು. ಈ ವೇಳೆ ಶಭಮನ್ ಗಿಲ್ , ರಾಹುಲ್ ತ್ರಿಪಾಠಿ ಉತ್ತಮ ಜೊತೆಯಾಟ ನೀಡಿದರು.
ರಾಹುಲ್ ತ್ರಿಪಾಠಿ 16 ಎಸೆತದಲ್ಲಿ 35 ರನ್ ಸಿಡಿಸಿ ಔಟಾದರು.
ಬಳಿಕ ಬಂದ ಸೂರ್ಯಕುಮಾರ್ ಯಾದವ್ ಅಬ್ಬರದ ಬ್ಯಾಟಿಂಗ್ ಲಂಕಾ ತಂಡಕ್ಕೆ ತಲೆನೋವು ತಂದಿತು.
ಇತ್ತ ಶುಭಮನ್ ಗಿಲ್ 36 ಎಸೆತದಲ್ಲಿ 46 ರನ್ ಸಿಡಿಸಿ ಔಟಾದರು. ಆದರೆ ಸೂರ್ಯಕುಮಾರ್ ಯಾದವ್ ಹೋರಾಟ ಮುಂದುವರಿಯಿತು. ಪಾಂಡ್ಯ 4 ರನ್ ಸಿಡಿಸಿ ಔಟಾದರು. ಇತ್ತ ದೀಪಕ್ ಹೂಡ ಕೂಡ 4 ರನ್ ಸಿಡಿಸಿ ಔಟಾದರು. ಇನ್ನು ಅಕ್ಸರ್ ಪಟೇಲ್ ಜೊತೆ ಇನ್ನಿಂಗ್ಸ್ ಮುಂದುವರಿಸಿದ ಸೂರ್ಯಕುಮಾರ್ 45 ಎಸೆತದಲ್ಲಿ ಸೆಂಚುರಿ ಸಿಡಿಸಿದರು.
ಅಕ್ಸರ್ ಪಟೇಲ್ 9 ಎಸೆತದಲ್ಲಿ ಅಜೇಯ 21 ರನ್ ಸಿಡಿಸಿದರು. ಇತ್ತ ಸೂರ್ಯಕುಮಾರ್ ಯಾದವ್ 51 ಎಸೆತದಲ್ಲಿ 112 ರನ್ ಸಿಡಿಸಿದರು. ಈ ಮೂಲಕ ಟೀಂ ಇಂಡಿಯಾ 5 ವಿಕೆಟ್ ನಷ್ಟಕ್ಕೆ 228 ರನ್ ಸಿಡಿಸಿತು.