ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಾಹೀರಾತು ಪ್ರಪಂಚ ಜನರನ್ನ ಎಷ್ಟರ ಮಟ್ಟಿಗೆ ಮೋಡಿ ಮಾಡಿದೆ ಎಂದರೆ, ತಮ್ಮ ನೆಚ್ಚಿನ ನಟ ನಟಿಯರು ಒಂದು ಜಾಹೀರಾತಿನಲ್ಲಿ ಕಾಣಿಸಿಕೊಂಡರೆ ಅದನ್ನೇ ಬ್ಲೈಂಡ್ ಆಗಿ ನಂಬಿ ಆ ವಸ್ತುಗಳನ್ನ ಖರೀದಿಸಲು ಮುಂದಾಗುತ್ತಾರೆ. ಅಸಲಿಯತ್ತಿಗೆ ಜಾಹೀರಾತಿನಲ್ಲಿ ಕಾಣಿಸಿಕೊಳ್ಳುವ ಈ ಸೆಲೆಬ್ರಿಟಿಗಳು ಅವುಗಳನ್ನು ಬಳಸಿಯೇ ಇರುವುದಿಲ್ಲ ಎನ್ನುವುದು ಜನರಿಗೆ ಗೊತ್ತೇ ಇಲ್ಲ. ಈಗ ಅಂತಹುದೇ ಒಂದು ಪ್ರಕರಣ ರಿವೀಲ್ ಆಗಿದೆ.
ಹೌದು! ಬ್ಯೂಟಿ ಕ್ರೀಮ್ ಒಂದರ ಜಾಹೀರಾತಿನಲ್ಲಿ ನಟಿ ಯಾಮಿ ಕಾಣಿಸಿಕೊಳ್ಳುತ್ತಿದ್ರು, ಈ ಕ್ರೀಮ್ ಹಚ್ಚಿದರೆ ತಮ್ಮಂತೆಯೇ ಗ್ಲೋ ಆಗಬಹುದು ಎಂದು ಅವರು ಈ ಜಾಹೀರಾತಿನಲ್ಲಿ ಹೇಳುತ್ತಾರೆ. ಆದರೆ, ಅವರಿಗೆ ಚರ್ಮದ ಸಮಸ್ಯೆ ಇರುವ ವಿಷಯವೊಂದು ಹೊರಬಿದ್ದಿದೆ.
ಈ ನಟಿ ಕೆರಟಾಸಿಸ್ ಪಿಲಾರಿಸ್ ಎಂಬ ಕಾಯಿಲೆಯಿಂದ ಬಳಲುತ್ತಿದ್ದಾರೆ. ಇದರಲ್ಲಿ ಚರ್ಮವು ಒರಟಾಗಿರುತ್ತದೆ, ಕಲೆಗಳು ಮತ್ತು ಸಣ್ಣ ಮೊಡವೆಗಳು ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ. ಈ ಮೊಡವೆಗಳ ಬಣ್ಣವು ಕೆಂಪು-ಕಂದು ಆಗಿರಬಹುದು. ಮೊಡವೆಗಳು ಕೆನ್ನೆ, ಕೈ ಅಥವಾ ತೊಡೆಯ ಮೇಲ್ಭಾಗದಲ್ಲಿ ಕಾಣಿಸಿಕೊಳ್ಳುತ್ತವೆ. ಮೇಕಪ್ ಮಾಡಿಕೊಳ್ಳುವಾಗ ಈ ಸಮಸ್ಯೆ ಹೆಚ್ಚಾಗುತ್ತೆ, ಹೀಗಾಗಿ ಅನಿವಾರ್ಯದ ಸಂದರ್ಭಗಳಲ್ಲಿ ಅದರಲ್ಲಿಯೂ ಬ್ಯೂಟಿ ಕ್ರೀಮ್ನಂಥ ಜಾಹೀರಾತುಗಳಲ್ಲಿ ಮೇಕಪ್ ಮೊರೆ ಹೋಗಲೇಬೇಕಾಗಿದೆ.
ಅಷ್ಟಕ್ಕೂ, ಕೆರಾಟಾಸಿಸ್ ಪಿಲಾರಿಸ್ ಗಂಭೀರ ಕಾಯಿಲೆಯೇನಲ್ಲ ಎನ್ನುತ್ತಾರೆ ವೈದ್ಯರು.