ಹೊಸದಿಗಂತ ಡಿಜಿಟಲ್ ಡೆಸ್ಕ್:
ಮನಸ್ಸಿಗೆ ಬೇಜಾರಾಯ್ತು ಎಂದು ಕಳ್ಳತನ ಮಾಡುತ್ತಿದ್ದ ಕುಖ್ಯಾತ ರೌಡಿ ಮಂಜುನಾಥ್ ಅಲಿಯಾಸ್ ಮೂರ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬೆಳಗ್ಗೆ ಜೋಳ ವ್ಯಾಪಾರ ಮಾಡುತ್ತಿದ್ದ ಮೂರ್ತಿ ಬೇಜಾರಾದಾಗಲೆಲ್ಲಾ ಕಳ್ಳತನ ಮಾಡುತ್ತಿದ್ದ. ಬೇಜಾರಿನಲ್ಲಿ ಐದಾರು ಕಿಲೋಮೀಟರ್ ವಾಕ್ ಮಾಡುತ್ತಿದ್ದ. ಈ ವೇಳೆ ಯಾವ ಮನೆಯಲ್ಲಿ ಕಳ್ಳತನ ಮಾಡಬೇಕು, ಹೇಗೆ ಮಾಡಬೇಕು ಎನ್ನುವ ಸ್ಕೆಚ್ ಹಾಕುತ್ತಿದ್ದ.
ನಂತರ ಕಳ್ಳತನ ಮಾಡಿ ಏನೂ ಗೊತ್ತಿಲ್ಲದವನಂತೆ ಸೀದ ನಡೆದು ಬರುತ್ತಿದ್ದ. ಯಾರೂ ಈತನನ್ನು ಕಳ್ಳ ಎಂದು ಊಹಿಸಲು ಸಾಧ್ಯವಾಗದಷ್ಟು ಮಾಮೂಲಿಯಾಗಿ ನಡೆದುಕೊಳ್ಳುತ್ತಿದ್ದ.
ಸಿಸಿಟಿವಿ ಆಧರಿಸಿ ಆತನ ಮುಖದ ಮೇಲಿದ್ದ ಗುರುತನ್ನು ಗಮನಿಸಿ ಬೆಂಗಳೂರು ಪೊಲೀಸರು ಆತನನ್ನು ಬಂಧಿಸಿದ್ದಾರೆ. ಸುಮಾರು ೨೦ಕ್ಕೂ ಹೆಚ್ಚು ಮನೆಗಳಲ್ಲಿ ಆತ ಕಳ್ಳತನ ಮಾಡಿದ್ದ ಎನ್ನಲಾಗಿದೆ. ಕೈಗೆ ಸಿಕ್ಕ ವಸ್ತುಗಳಿಂದ ಮನೆ ಬೀಗ ಒಡೆಯುತ್ತಿದ್ದ. ಡಂಬಲ್ಸ್‌ನಲ್ಲಿ ಬೀಗ ಒಡೆದು, ಡಂಬಲ್ಸ್ ತನ್ನ ಹೆಗಲ ಮೇಲೆ ಇಟ್ಟುಕೊಂಡು ಬರುತ್ತಿದ್ದ ಎನ್ನಲಾಗಿದೆ.