ಗುಜರಾತ್ ಚುನಾವಣೆಯಲ್ಲಿ ‘ಮೀಸೆ ಮ್ಯಾನ್’ ಸ್ಪರ್ಧೆ: ಮೀಸೆಯನ್ನು ಪ್ರೋತ್ಸಾಹಿಸುವಂತೆ ಸರ್ಕಾರಕ್ಕೆ ಮನವಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಅವರ ಹೆಸರು ಮಗನ್‌ಭಾಯ್ ಸೋಲಂಕಿ, ಅವರಿಗೆ 57 ವರ್ಷ. ಅವರಿಗೆ 2.5 ಅಡಿ ಮೀಸೆ ಇದೆ. ಸ್ಥಳೀಯರು ಅವರನ್ನು ಪ್ರೀತಿಯಿಂದ ‘ಮೀಸೆ ಮ್ಯಾನ್’ ಎಂತಲೂ ಕರೆಯುತ್ತಾರೆ. ಪ್ರಸ್ತುತ ನಡೆಯುತ್ತಿರುವ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಅವರು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ. ಯುವಕರು ಮೀಸೆಯನ್ನು ಬೆಳೆಸಲು ಸರ್ಕಾರ ಪ್ರೋತ್ಸಾಹಿಸಬೇಕೆಂದು ಸೋಲಂಕಿ ಮನವಿ ಮಾಡಿದ್ದಾರೆ. ಹಿಮ್ಮತ್ ನಗರ ಕ್ಷೇತ್ರದಿಂದ ಸ್ಪರ್ಧಿಸಿರುವ ಅವರು, ಈ ಹಿಂದೆ ಸೇನೆಯಲ್ಲಿ ಸೇವೆ ಸಲ್ಲಿಸಿ, 2012ರಲ್ಲಿ ನಿವೃತ್ತರಾದರು.

2017ರ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಅವರು ಆ ಬಾರಿ ಬಿಎಸ್‌ಪಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದರು. ಆ ಚುನಾವಣೆಯಲ್ಲಿ ಸೋತರೂ ಹಿಂದೆ ಸರಿಯದೆ 2019ರ ಲೋಕಸಭೆ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದೇನೆ ಎಂದರು. ಈಗಲೂ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದೇನೆ ಪ್ರಚಾರದ ಅಂಗವಾಗಿ ಹೋದಲ್ಲೆಲ್ಲಾ ಅವರ ಮೀಸೆ ವಿಶೇಷ ಆಕರ್ಷಣೆಯಾಗಿ ನಿಲ್ಲುತ್ತದೆ ಎಂದರು.

ಈ ಹಿಂದೆ ಸೇನೆಯಲ್ಲಿ ಕೆಲಸ ಮಾಡುತ್ತಿದ್ದಾಗಲೂ ನನ್ನ ಮೀಸೆ ಹಿರಿಯ ಅಧಿಕಾರಿಗಳಿಂದ ಉತ್ತಮ ಮನ್ನಣೆ ಗಳಿಸಿತ್ತು. ಚುನಾವಣೆಗೆ ಸ್ಪರ್ಧಿಸುವ ಸಂದರ್ಭದಲ್ಲಿ ಅವರ ಮೀಸೆ ನೋಡಿ ಜನ ಅಚ್ಚರಿಗೊಂಡಿದ್ದಾರೆ. ಮಕ್ಕಳು ಅವರ ಬಳಿಗೆ ಬಂದು ಮೀಸೆ ಮುಟ್ಟಿ ಖುಷಿ ಪಡುತ್ತಿದ್ದಾರೆ. ಇಷ್ಟು ಉದ್ದದ ಮೀಸೆಯನ್ನು ಹೇಗೆ ಬೆಳೆಸುವುದು ಎಂದು ಯುವಕರು ಕೇಳುತ್ತಿದ್ದಾರೆ ಎಂದು ಪ್ರತಿಕ್ರಿಯಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!