ಹೊಸದಿಗಂತ ಡಿಜಿಟಲ್ ಡೆಸ್ಕ್:
ಡೇಟಿಂಗ್ನಲ್ಲಿದ್ದ ಯುವತಿಯ ದೇಹವನ್ನು 35 ತುಂಡುಗಳನ್ನಾಗಿ ಮಾಡಿ ಫ್ರಿಡ್ಜ್ನಲ್ಲಿಟ್ಟಿದ್ದ ಕೊಲೆ ಪ್ರಕರಣ ಇಡೀ ದೇಶವೇ ಬೆಚ್ಚಿ ಬಿದ್ದಿತ್ತು. ಇದೀಗ ಈ ಪ್ರಕರಣದ ಮೂಲ ಕೆದಕುತ್ತಾ ಹೋದ ಪೊಲೀಸರಿಗೆ ರೋಚಕ ಮಾಹಿತಿಗಳು ಸಿಗುತ್ತಿದೆ.
ಆರು ತಿಂಗಳ ಹಿಂದೆ ಆರೋಪಿ ಅಫ್ತಾನ್ ಅಮೀನ್ ಕೊಲೆ ಮಾಡಿದ್ದು, ನಾನು ಪ್ರತಿ ದಿನ ಅಮೇರಿಕಾದ ಕ್ರೈ ಸಂಬಂಧಿ ‘ಡೆಕ್ಸ್ಟರ್’ (Dexter) ಕಾರ್ಯಕ್ರಮ ನೋಡುತ್ತಿದ್ದೆ. ಇದರಿಂದ ಪ್ರೇರೇಪಿತನಾಗಿ ಕೊಲೆ ಮಾಡಿರುವುದಾಗಿ ಹೇಳಿಕೊಂಡಿದ್ದಾನೆ.
ಅಮೆರಿಕದಲ್ಲಿ ತೆರೆಕಂಡಿದ್ದ ಕಾಲ್ಪನಿಕ ಕಥೆಗಳ ಆಧರಿತ ಸಿನಿಮಾ `ಡೆಕ್ಸ್ಟರ್’ (Dexter Movie) ಚಿತ್ರದಲ್ಲಿ ನಾಯಕ ವಿಧಿವಿಜ್ಞಾನ (Forensics Expert) ತಜ್ಞನಾಗಿರುತ್ತಾನೆ. ಚಾಣಾಕ್ಷನಾಗಿ ಸರಣಿ ಕೊಲೆಗಳನ್ನು ಮಾಡುತ್ತಾ, ಮತ್ತೊಂದೆಡೆ ಸಾಮಾನ್ಯನಾಗಿ ಜೀವನ ನಡೆಸುತ್ತಿರುತ್ತಾನೆ. ದೆಹಲಿಯಲ್ಲೂ ಆರೋಪಿ ಅಫ್ತಾಬ್ ಬಾಣಸಿಗನಾಗಿದ್ದರಿಂದ ಮಾಂಸ ಕತ್ತರಿಸುವ ಕತ್ತಿ ಬಳಸುವಲ್ಲಿ ನಿಪುಣನಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಈತ ತನ್ನ ಗೆಳತಿಯನ್ನ ಕತ್ತರಿಸಿ ಮೃತದೇಹವನ್ನು ಯಾರಿಗೂ ಗೊತ್ತಾಗದಂತೆ ವಿಲೇವಾರಿ ಮಾಡಲು 18 ದಿನ ತೆಗೆದುಕೊಂಡಿದ್ದ. ಈ ವೇಳೆ ಮೃತದೇಹ ಕೊಳೆತು ವಾಸನೆ ಬರಬಾರದೆಂದು ಹೆಚ್ಚು ಅಗರಬತ್ತಿ ಹಚ್ಚಿಡುತ್ತಿದ್ದನು .
ಇನ್ನು ಆಕೆಯ ದೇಹವನ್ನು 35 ಪೀಸ್‌ಗಳಾಗಿ ಕತ್ತರಿ, ಅದನ್ನಿಡಲು 300 ಲೀಟರ್ ಸಾಮರ್ಥ್ಯದ ಹೊಸ ಫ್ರಿಡ್ಜ್ ಸಹ ಖರೀದಿಸಿದ್ದನು. ಈ ಕೊಲೆ ಮಾಡಲು ಇದೇ ರೀತಿ ಕೃತ್ಯಗಳನ್ನು ಎಸಗುವ ಅಮೆರಿಕದ ಡೆಕ್ಸ್ಟರ್ ಸಿನಿಮಾ ನೋಡಿ ಪ್ರೇರಣೆಗೊಂಡಿದ್ದ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.
ಕೊಲೆಯಾದ ಶ್ರದ್ಧಾ ಮತ್ತು ಅಫ್ತಾನ್ ಅಮೀನ್ ಎಂಬಾತ ಲಿವಿಂಗ್ ಇನ್ ರಿಲೇಷನ್ನಲ್ಲಿ ಕೆಲವು ಸಮಯದಿಂದ ಒಟ್ಟಾಗಿದ್ದರು. ಶ್ರದ್ಧಾ ದೆಹಲಿಯ ಅಂತಾರಾಷ್ಟ್ರೀಯ ಕಂಪೆನಿಯೊಂದರ ಉದ್ಯೋಗಿ. ಅಲ್ಲಿ ಪರಿಚಯವಾದ ಹುಡುಗ ಅಫ್ತಾನ್ ಅಮೀನ್. ಇಬ್ಬರ ಪರಿಚಯ ನಿಧಾನವಾಗಿ ಪ್ರೀತಿಯತ್ತ ತಿರುಗಿದೆ. ನಂತರ ಇಬ್ಬರೂ ಪರಸ್ಪರ ಒಪ್ಪಿಗೆಯೊಂದಿಗೆ ಡೇಟಿಂಗ್ ಮಾಡುತ್ತಿದ್ದರು.
ಪೊಲೀಸ್ ಮಾಹಿತಿಯ ಪ್ರಕಾರ, ಕಳೆದ ಮೇ ತಿಂಗಳಿನಲ್ಲಿ ಇಬ್ಬರ ನಡುವೆ ಜಗಳ ಆಗಿತ್ತು. ನಂತರದಲ್ಲಿ ಅಫ್ತಾಬ್ ಅಮೀನ್ ಶ್ರದ್ಧಾಳನ್ನು ಕೊಲೆ ಮಾಡಿದ್ದಾನೆ. ಇದೀಗ ಈ ಅಮಾನುಷ ಕೃತ್ಯ ಎಸಗಿದ 5 ತಿಂಗಳ ಬಳಿಕ ಕೊಲೆಗಡುಕನನ್ನು ಪೊಲೀಸರು ಬಂಧಿಸಿದ್ದಾರೆ.
ಕೊಲೆ ಆರೋಪಿ ವಿವಿಧ ಕಾಡುಗಳಲ್ಲಿ ಹೂತಿಟ್ಟಿದ್ದ ದೇಹದ ಕೆಲ ಭಾಗಗಳನ್ನು ಸಂಗ್ರಹಿಸಿದ್ದಾರೆ. ಆದರೆ ಅವು ಇದೇ ಯುವತಿಯ ದೇಹದ ಭಾಗವೆಂದು ಖಚಿತವಾಗಿ ಹೇಳಿಲ್ಲ. ಕೊಲೆಗೆ ಬಳಸಿದ್ದ ಕತ್ತಿ ಸಹ ಇನ್ನೂ ಪತ್ತೆಯಾಗಿಲ್ಲ ಎಂದು ಉನ್ನತ ಮೂಲಗಳು ತಿಳಿಸಿವೆ.