ಗೆಲುವಿನ ಸಂಭ್ರಮದಲ್ಲಿ ಕಾಂತಾರ: ಬೀಚ್ ನಲ್ಲಿ ಅರಳಿತು ಕಲಾಕೃತಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕರಾವಳಿಯ ದೈವಾರಾಧನೆಯ ಸೊಬಗನ್ನು ಜಗ್ಗತ್ತಿಗೆ ಪಸರಿಸಿದ ಕಾಂತಾರ ಚಿತ್ರವು 50 ದಿನಗಳನ್ನು ಪೂರೈಸಿದೆ.

ಈ ಸಂದರ್ಭಮಣಿಪಾಲ್ ಸ್ಯಾಂಡ್ ಹಾರ್ಟ್ ನ ಕಲಾವಿದರಾದ ಶ್ರೀನಾಥ್ ಮಣಿಪಾಲ, ವೆಂಕಿ ಪಲಿಮಾರು, ರವಿ ಹಿರೆಬೆಟ್ಟು ಆಭರಣ ಜ್ಯುವೆಲೆರ್ಸ್ ನ ಸಹಯೋಗದೊಂದಿಗೆ ಕಾಪು ಕಡಲಕಿನಾರೆಯಲ್ಲಿ ಅದ್ಭುತವಾದ ಮರಳುಶಿಲ್ಪವನ್ನು ರಚಿಸಿದ್ದಾರೆ ಶುಭ ಕೋರಿದ್ದಾರೆ.

ಇದೀಗ ಕಾಪು ಬೀಚ್ ಗೆ ಸಾವಿರಾರು ಜನರು ಈ ಕಲಾಕೃತಿಯನ್ನು ನೋಡುವುದಕ್ಕೆ ಬರುತ್ತಿದ್ದು, ಕಾಂತಾರ ಸಿನಿಮಾದ ಗುಣಗಾನ ಮಾಡುತ್ತಿದ್ದಾರೆ.

ಮುನ್ನೂರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಕಾಂತಾರ ಸಿನಿಮಾ ಐವತ್ತು ದಿನಗಳ ಪ್ರದರ್ಶನ ಕಂಡಿದ್ದು, ಬಹುತೇಕ ಚಿತ್ರಮಂದಿರಗಳು ಹೌಸ್ ಫುಲ್ ಪ್ರದರ್ಶನಕ್ಕೆ ಇನ್ನೂ ಸಾಕ್ಷಿ ಆಗುತ್ತಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!