October 5, 2026
Monday, October 5, 2026
spot_img

ದಿನಭವಿಷ್ಯ: ಎಂದಿನಂತಿಲ್ಲ ಈ ದಿನ, ಅನಿರೀಕ್ಷಿತ ಧನಲಾಭವಿದೆ!

ಮೇಷ
ಈ ದಿನ ಕೆಲಸವು ಹೊರೆಯಾಗಲಿದೆ. ಅದರ ಜತೆಗೇ ಮನಸ್ಸು ಅಸ್ತವ್ಯಸ್ತ. ಯಾವುದೋ ವಿಚಾರ ಭಾವನಾತ್ಮಕ ಸಂಚಲನೆ ಸೃಷ್ಟಿಸುವುದು.    
ವೃಷಭ
ಎಂದಿನಂತಲ್ಲ ಈ ದಿನ. ಕೌಟುಂಬಿಕ ವಿಚಾರ ಭಾವುಕ ಸನ್ನಿವೇಶಕ್ಕೆ ಕಾರಣವಾಗಲಿದೆ.  ಅನಿರೀಕ್ಷಿತ ಧನಲಾಭ. ಆರೋಗ್ಯ ಏರುಪೇರು.                    
ಮಿಥುನ
ಕಾರ್ಯ ವಿಳಂಬ. ಹತಾಶೆ ಹೆಚ್ಚಳ. ಯೋಜಿಸಿ ಕಾರ್ಯ ಎಸಗಿ. ಆಪ್ತ ಜತೆ ವೈಮನಸ್ಸು. ಮುಕ್ತವಾಗಿ ಮಾತುಕತೆ ನಡೆಸಿ. ಕಠಿಣ ಧೋರಣೆ ತ್ಯಜಿಸಿ.              
ಕಟಕ
ಎಂದಿಗಿಂತ ಹೆಚ್ಚು ಜವಾಬ್ದಾರಿ. ಸಾಲ ಪಡೆಯುವ ಸನ್ನಿವೇಶ ಉಂಟಾದೀತು. ಸ್ವಾಸ್ಥ್ಯದ ಬಗ್ಗೆ ಚಿಂತಿಸದಿರಿ. ಎಲ್ಲವೂ ಸರಿಯಾಗಿದೆ.
ಸಿಂಹ
ಇಂದು ಎಚ್ಚರದಿಂದ ವ್ಯವಹಾರ ನಡೆಸಿ. ಪ್ರತಿಕೂಲ ಪರಿಸ್ಥಿತಿ ಎದುರಾದೀತು. ಅದೃಷ್ಟ ನಂಬಿ ಕೂರಬೇಡಿ. ಆಪ್ತರ ಜತೆ ಭಿನ್ನಾಭಿಪ್ರಾಯ.                
ಕನ್ಯಾ
ಲೆಕ್ಕಾಚಾರದಿಂದ ಹೆಜ್ಜೆಯಿಡಿ. ಇಲ್ಲವಾದರೆ ಸಂಘರ್ಷದ ಪರಿಸ್ಥಿತಿ ನಿರ್ಮಾಣವಾದೀತು. ಶೇರು ವ್ಯವಹಾರದಲ್ಲಿ ಲಾಭ ಒದಗುವುದು.    
ತುಲಾ
ಎಲ್ಲರಿಗೂ ನೀವೇ ಬೇಕಾಗುತ್ತೀರಿ. ನೆರವಿಗೆ, ಸಮಸ್ಯೆ ಪರಿಹಾರಕ್ಕೆ ಎಲ್ಲದಕ್ಕೂ ನಿಮ್ಮನ್ನೆ ಕೋರುವರು.ಒಟ್ಟಿನಲ್ಲಿ ಬಿಡುವಿಲ್ಲದ ದಿನ.
ವೃಶ್ಚಿಕ
ನಿಮ್ಮ ಪಾಲಿಗೆ ಮಹತ್ವದ್ದಾದ ಕೆಲವಾರು ಬೆಳವಣಿಗೆ ಇಂದು ಸಂಭವಿಸಲಿದೆ. .ಅನವಶ್ಯ ಖರ್ಚು ತಪ್ಪಿಸಿ. ಹೊಟ್ಟೆ ಸಂಬಂಧ ಸಮಸ್ಯೆ.    
ಧನು
ನಿಮ್ಮ ಉದ್ದೇಶ ಪ್ರಾಪ್ತಿಯಾಗಲು ಕಠಿಣ ಶ್ರಮ ಪಡಬೇಕಾಗುವುದು.  ಹಣದ ವಿಚಾರದಲ್ಲಿ ಅತೃಪ್ತಿ. ಶೀತ ಸಂಬಂಧ ಅನಾರೋಗ್ಯ ಸಂಭವ.    
ಮಕರ
ಹೆಚ್ಚು ಕಾರ್ಯತತ್ಪರ ದಿನ. ಪ್ರಮುಖ ಕಾರ್ಯ ಎಸಗುವ ಮುನ್ನ ಮತ್ತೊಮ್ಮೆ ಯೋಚಿಸಿ. ಕ್ಷಿಪ್ರ ಧನಲಾಭ. ಸ್ವಾಸ್ಥ್ಯಕ್ಕೆ ಹೆಚ್ಚು ಗಮನ ಕೊಡಿ.                
ಕುಂಭ
 ಮನೆಯಲ್ಲೂ ವೃತ್ತಿಯಲ್ಲೂ ಅಽಕ ಹೊಣೆ. ಕಾರ್ಯವಿಳಂಬ.  ಆರ್ಥಿಕ ಹಿನ್ನಡೆ.  ಮಿತ್ರರಿಂದ ಕಿರಿಕಿರಿ. ಕಣ್ಣಿನ ಅಲರ್ಜಿ ಸಂಭವ
ಮೀನ
 ತೃಪ್ತಿಕರ ದಿನ. ಆರ್ಥಿಕ ಪ್ರಗತಿ. ಕೌಟುಂಬಿಕ ಬದುಕಲ್ಲೂ ಸಮಾಧಾನ ತರುವ ಬೆಳವಣಿಗೆ. ಆಪ್ತರಿಂದ ಪ್ರೇಮ ನಿವೇದನೆ ಸಾಧ್ಯ.

Must Read