ಹೊಸದಿಗಂತ ಡಿಜಿಟಲ್ ಡೆಸ್ಕ್:
ಈ ಸರ್ವಾಧಿಕಾರತ್ವ ಹೆಚ್ಚು ದಿನ ಉಳಿಯೋದಿಲ್ಲ. ಕೊನೆಯಾಗಲೇಬೇಕು. ಅತ್ತೆಗೊಂದು ಕಾಲ, ಸೊಸೆಗೊಂದು ಕಾಲ ಎಂಬುದಾಗಿ ಕೋರ್ಟ್ ನಿಂದ ಹೊರ ಬರುವ ವೇಳೆಯಲ್ಲಿ ಪರಿಷತ್ ಸದಸ್ಯ ಸಿ.ಟಿ ರವಿ ಹೇಳಿದ್ದಾರೆ.
ಇಂದು ಬೆಳಗಾವಿಯ ಜೆ ಎಂ ಎಫ್ ಸಿ ನ್ಯಾಯಾಲಯಕ್ಕೆ ಪೊಲೀಸರು ಅವರನ್ನು ಹಾಜರುಪಡಿಸಿದರು. ಕೋರ್ಟ್ ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಕೇಸ್ ವರ್ಗಾವಣೆ ಮಾಡಿದ ನಂತ್ರ, ಕೋರ್ಟ್ ನಿಂದ ಹೊರ ಬಂದಾಗ ಸಿ.ಟಿ ರವಿ ಸುದ್ದಿಗಾರರೊಂದಿಗೆ ಮಾತನಾಡಿದರು.
ನೋಟಿಸ್ ಕೊಡದೇ ಅಕ್ರಮ ಬಂಧನದಲ್ಲಿಟ್ಟಿದ್ದಾರೆ. ಇಡೀ ರಾತ್ರಿ ಮೂರು ಜಿಲ್ಲೆಯಲ್ಲಿ ಸುತ್ತಾಡಿಸಿದ್ದಾರೆ. ಪೊಲೀಸರು ಸರ್ವಾಧಿಕಾರ ಮೆರಿದ್ದಾರೆ. ಎಲ್ಲದಕ್ಕೂ ಒಂದು ಪುಲ್ ಸ್ಟಾಪ್ ಬೀಳಲೇಬೇಕು. ಸರ್ವಾಧಿಕಾರ ಬಹಳ ದಿನ ನಡೆಯಲ್ಲ ಎಂದರು.
ಸರ್ವಾಧಿಕಾರ ಕೊನೆಯಾಗಲೇಬೇಕು. ಪೊಲೀಸರನ್ನು ದುರ್ಬಳಕೆ ಮಾಡಿಕೊಂಡು ನನ್ನ ಮೇಲೆ ಹಲ್ಲೆ ಮಾಡಲಾಗಿದೆ. ಅತ್ತೆಗೊಂದು ಕಾಲ, ಸೊಸೆಗೊಂದು ಕಾಲ. ನಮ್ಮ ಕಾಲವೂ ಬರುತ್ತದೆ. ಆಗ ಹೇಳ್ತೀವಿ ಎಂಬುದಾಗಿ ವಾಗ್ಧಾಳಿ ನಡೆಸಿದರು.