ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿರಾಟ್ ಕೊಹ್ಲಿ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ? ಕ್ರಿಕೆಟ್ ಲೋಕದ ಅಪ್ರತಿಮ ಪ್ರತಿಭೆ, ಸ್ಟೇಡಿಯಂನಲ್ಲಿ ತನ್ನ ಆಟದ ಮೂಲಕ ವಿರಾಟ ರೂಪ ತೋರಿಸುವ ವಿರಾಟ್ ಕೊಹ್ಲಿ ಎಲ್ಲಾ ಕ್ರಿಕೆಟ್ ಅಭಿಮಾನಿಗಳಿಗೂ ಅಚ್ಚು- ಮೆಚ್ಚಿನ ಆಟಗಾರ ಎಂದರೆ ತಪ್ಪಾಗಲಾರದು.
ಇಂತಹ ಅದ್ಭುತ ಆಟಗಾರ ಕ್ರಿಕೆಟ್ ಲೋಕಕ್ಕೆ ಬರಲು ಅವರ ತಂದೆ ಬಹಳ ಪ್ರಮುಖ ಪಾತ್ರ ವಹಿಸಿದ್ದಾರೆ ಎಂಬುದು ಸಾಕಷ್ಟು ಜನರಿಗೆ ತಿಳಿದಿದೆ. ಆದರೆ ಕೊಹ್ಲಿಯ ಹಿಂದೆ ಅವರ ತಂದೆ ಮಾತ್ರವಲ್ಲದೇ ಮತ್ತೊಬ್ಬ ಮಹಾನ್ ವ್ಯಕ್ತಿಯ ಪಾತ್ರ ಕೂಡ ಇದೆ ಎಂದರೆ ಒಪ್ಪುತ್ತೀರಾ? ಹೌದು, ವಿರಾಟ್ ಈಗಾಗಲೇ ಕ್ರಿಕೆಟ್ ಲೋಕದಲ್ಲಿ ತಮ್ಮದೇಯಾದ ಛಾಪು ಮೂಡಿಸಿದ್ದಾರೆ. ಅದು ಮಾತ್ರ ಅಲ್ಲದೇ ಅನೇಕ ಅಭಿಮಾನಿಗಳ ಪಾಲಿನ ಕಿಂಗ್ ಕೊಹ್ಲಿ ಆಗಿದ್ದಾರೆ.
ವಿರಾಟ್ ತಮ್ಮ ಬಾಲ್ಯದಲ್ಲಿ ಮನೆಯ ಪಕ್ಕದ ಕಾಲೋನಿಯಲ್ಲಿ ಗಲ್ಲಿ ಕ್ರಿಕೆಟ್ ಆಡ್ತಿದ್ದರಂತೆ, ಕೊಹ್ಲಿಯ ಆಟವನ್ನು ಪ್ರತಿ ಸಲ ಗಮನಿಸುತ್ತಿದ್ದ ಅವರ ಮನೆಯ ಪಕ್ಕದಲ್ಲಿದ್ದ ಜೈ ಗಣೇಶ್ ಎಂಬ ವ್ಯಕ್ತಿ ವಿರಾಟ್ ಅವರ ಆಟವನ್ನು ಬಹಳ ಇಷ್ಟ ಪಡುತ್ತಿದ್ದರಂತೆ.
ಆಗಲೇ ಅವರು ವಿರಾಟ್ ತಂದೆಯ ಬಳಿ ಬಂದು ನಿಮ್ಮ ಮಗನಲ್ಲಿ ಒಳ್ಳೆಯ ಟ್ಯಾಲೆಂಟ್ ಇದೆ ಅವನನ್ನು ಕೋಚಿಂಗ್ ಸೆಂಟರ್ ಗೆ ಸೇರಿಸಿ ಎಂದು ಹೇಳಿದ್ದರಂತೆ. ಇದನ್ನು ತಿಳಿದ ವಿರಾಟ್ ತಂದೆ ಅವರು ಹೇಳಿದಂತೆ ಕೊಹ್ಲಿ ಅನ್ನು ಕ್ರಿಕೆಟ್ ಕೋಚಿಂಗ್ ಗೆ ಸೇರಿಸಿದರು. ನಂತರದಲ್ಲಿ ಏನೆಲ್ಲ ಬದಲಾವಣೆಗಳು ಆಗಿದೆ ಎಂಬುದು ಇದೀಗ ಇತಿಹಾಸವಾಗಿದೆ. ಕ್ರಿಕೆಟ್ ಜಗತ್ತಿನಲ್ಲಿ ವಿರಾಟ್ ಕೊಹ್ಲಿ ಈಗ ಸುಲ್ತಾನನಂತೆ ಮಿಂಚ್ಚುತ್ತಿದ್ದಾರೆ.