ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಾಜಿ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರು 2024 ರ ತಮ್ಮ ಅತ್ಯುತ್ತಮ ಸಿನಿಮಾಗಳ ಪಟ್ಟಿಯನ್ನೂ ಬಹಿರಂಗಪಡಿಸಿದ್ದಾರೆ. ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಭಾರತೀಯ ಸಿನಿಮಾ ಇರುವುದು ವಿಶೇಷ. ಕೆಲವು ಸಿನಿಮಾಗಳು ವಿಮರ್ಶಕರಿಂದ ಮೆಚ್ಚುಗೆ ಪಡೆದರೂ ಜನರಿಗೆ ತಲುಪಿರುವುದಿಲ್ಲ ಇದೀಗ ಒಬಾಮ ಈ ಸಿನಿಮಾವನ್ನು ತಪ್ಪದೇ ನೋಡಿ ಎಂದು ಟ್ವೀಟ್ ಮಾಡಿದ್ದಾರೆ.
ಗೋಲ್ಡನ್ ಗ್ಲೋಬ್‌ನಲ್ಲಿ ನಾಮನಿರ್ದೇಶನಗೊಂಡ ಭಾರತೀಯ ಚಲನಚಿತ್ರ ‘ಆಲ್ ವಿ ಇಮ್ಯಾಜಿನ್ ಆಸ್ ಲೈಟ್’ ಸಿನಿಮಾವನ್ನು ತಪ್ಪದೇ ನೋಡಿ ಎಂದು ಟ್ವೀಟ್ ಮಾಡಿದ್ದಾರೆ. ಈ ಸಿನಿಮಾ ನಿರ್ದೇಶಕಕಿ ಪಾಯಲ್ ಕಪಾಡಿಯಾ.
ಈ ಬಗ್ಗೆ ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮ 2024ರಲ್ಲಿ ನೋಡಲೇಬೇಕಾದ’ ಸಿನಿಮಾಗಳ ಲಿಸ್ಟ್ ನೀಡಿದ್ದಾರೆ “ಈ ವರ್ಷ ನಾನು ಶಿಫಾರಸು ಮಾಡುವ ಕೆಲವು ಚಲನಚಿತ್ರಗಳು ಇಲ್ಲಿವೆ ಎಂದು ಅವರು ಬರೆದಿದ್ದಾರೆ. ಅವರ ಪಟ್ಟಿಯಲ್ಲಿರುವ ಇತರ ಚಿತ್ರಗಳಲ್ಲಿ ಡೆನಿಸ್ ವಿಲ್ಲೆನ್ಯೂವ್ ಅವರ ‘ಡ್ಯೂನ್ ಭಾಗ 2’, ಎಡ್ವರ್ಡ್ ಬರ್ಗರ್ ಅವರ ‘ಕಾನ್ಕ್ಲೇವ್’, ಮಾಲ್ಕಮ್ ವಾಷಿಂಗ್ಟನ್ ಅವರ ‘ದಿ ಪಿಯಾನೋ ಲೆಸನ್’ ಮತ್ತು ಸೀನ್ ಬೇಕರ್ ಅವರ ‘ಅನೋರಾ’ ಸೇರಿವೆ. ಈ ಪೈಕಿ ‘ಆಲ್ ವಿ ಇಮ್ಯಾಜಿನ್ ಆ್ಯಸ್ ಲೈಟ್’ ಚಿತ್ರ ಮೊದಲ ಸ್ಥಾನದಲ್ಲಿ ಇದೆ.
ನಿರ್ದೇಶಕಿ ಪಾಯಲ್ ಕಪಾಡಿಯಾ ಅವರು ಮೇ 25 ರಂದು ಕೇನ್ಸ್ ಚಲನಚಿತ್ರೋತ್ಸವ 2024ದಲ್ಲಿ ಇತಿಹಾಸವನ್ನು ನಿರ್ಮಿಸಿದ್ದರು. ಮಲಯಾಳಂ ಹಾಗೂ ಹಿಂದಿ ಭಾಷೆಯ ಚಲನಚಿತ್ರ ‘ಆಲ್ ವಿ ಇಮ್ಯಾಜಿನ್ ಆಸ್ ಲೈಟ್ ದೇಶದ ಮೊದಲ ಗ್ರ್ಯಾಂಡ್ ಪ್ರಿಕ್ಸ್ ಪ್ರಶಸ್ತಿಯನ್ನು ಗೆದ್ದಿತ್ತು. ಹೀಗಾಗಿ ನಿರ್ದೇಶಕಕಿ ಕೆಲಸವನ್ನು ಪ್ರಧಾನಿ ಮೋದಿ ಶ್ಲಾಘಿಸಿದ್ದರು.
ಆಲ್ ವಿ ಇಮ್ಯಾಜಿನ್ ಆಸ್ ಲೈಟ್’ ಸಿನಿಮಾವು ಮಲಯಾಳಂ-ಹಿಂದಿ ಸಿನಿಮಾ ಆಗಿದೆ. ಆಸ್ಪತ್ರೆಯಲ್ಲಿ ನರ್ಸ್‌ಗಳಾಗಿ ಸೇವೆ ಸಲ್ಲಿಸುವ ಇಬ್ಬರು ರೂಮ್‌ಮೇಟ್‌ಗಳ ಕಥೆ ಇದರಲ್ಲಿದೆ. ಚಿತ್ರವು ಮೂರು ವಿಭಿನ್ನ ಮಹಿಳೆಯರ ನಡುವಿನ ಸ್ನೇಹದ ಕತೆ ಕೂಡ ಇದೆ. ಈ ಚಿತ್ರದ ಟ್ರೇಲರ್ ಯೂಟ್ಯೂಬ್ನಲ್ಲಿ ವೀಕ್ಷಣೆಗೆ ಲಭ್ಯವಿದೆ.