ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟ ವರುಣ್ ಧವನ್ ಬೇಬಿ ಜಾನ್ ಸಿನಿಮಾ ಪ್ರಮೋಷನ್ಸ್‌ನಲ್ಲಿ ಬ್ಯುಸಿಯಾಗಿದ್ದಾರೆ. ಸಂದರ್ಶನವೊಂದರಲ್ಲಿ ಘಟನೆಯೊಂದರ ಬಗ್ಗೆ ಮಾತನಾಡಿದ್ದಾರೆ.
ಪ್ರಭಾವಿ ವ್ಯಕ್ತಿಯ ಹೆಂಡತಿಯೊಬ್ಬರು ನನ್ನ ಜೊತೆ ಓಡಿ ಹೋಗೋಕೆ ತಯಾರಾಗಿದ್ದರು. ನನ್ನನ್ನು ಫಾಲೋ ಮಾಡಿಕೊಂಡು ಬಂದು ಮನೆಯೊಳಗೆ ಬಂದಿದ್ರು. ಏನು ಮಾಡ್ತಾರೋ ಅಂತ ಭಯವಾಗೋ ರೀತಿ ನಡೆದುಕೊಂಡಿದ್ರು. ಆಕೆ ಸಾಮಾನ್ಯ ಅಲ್ಲ. ಪ್ರಭಾವಿ ವ್ಯಕ್ತಿಯ ಪತ್ನಿ.
ಆ ವ್ಯಕ್ತಿಯ ಸ್ಥಾನ ಏನು ಎಂಬುದನ್ನು ನಾನು ಹೇಳುವುದಿಲ್ಲ. ಆದರೆ ಆತ ತುಂಬಾ ದೊಡ್ಡ ಮನುಷ್ಯ ಅಂತೂ ಹೌದು. ಅವರ ಹೆಂಡತಿಯನ್ನು ಯಾರೋ ದಾರಿ ತಪ್ಪಿಸಿದ್ದರು. ನನ್ನ ಹೆಸರು ಹೇಳಿಕೊಂಡು ಆಕೆಯ ಜೊತೆ ಯಾರೋ ಮಾತನಾಡಿದ್ದರು. ನನ್ನ ಮನೆಯ ಬಗ್ಗೆ ಆಕೆಗೆ ಎಲ್ಲವೂ ತಿಳಿದಿತ್ತು ಎಂದಿದ್ದಾರೆ ವರುಣ್ ಧವನ್.
ನಾನು ಆಕೆಯೊಂದಿಗೆ ಓಡಿಹೋಗಲು ಸಿದ್ಧವಾಗಿದ್ದೇನೆ ಎಂದು ಆ ಮಹಿಳೆ ಭಾವಿಸಿದ್ದರು. ಆ ಕ್ಷಣ ಭಯಾನಕವಾಗಿತ್ತು. ಆಗ ನಾನು ಪೊಲೀಸರಿಗೆ ಮಾಹಿತಿ ನೀಡಬೇಕಾಯಿತು. ಮಹಿಳಾ ಕಾನ್ಸ್ಟೇಬಲ್ ಬಂದು ಪರಿಸ್ಥಿತಿ ನಿಯಂತ್ರಿಸಿದ್ದರು ಎಂದು ವರುಣ್ ಧವನ್ ಅವರು ಹೇಳಿದ್ದಾರೆ.