ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ದೇಶದ ಐತಿಹಾಸಿಕ ಬಜೆಟ್ ಅನ್ನು ಮಂಡಿಸಿದ್ದಾರೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
ಈ ಬಜೆಟ್ ಅಭಿವೃದ್ಧಿಯನ್ನು ವೇಗಗೊಳಿಸುವ ವಿಶೇಷತೆಯನ್ನು ಹೊಂದಿದೆ. ಪ್ರತಿಬಾರಿಯ ಹಾಗೆ, ಈ ಬಾರಿಯೂ ಅವರು ಮೂಲಸೌಕರ್ಯ ವಲಯಕ್ಕೆ ಆದ್ಯತೆ ನೀಡಿದ್ದಾರೆ.
ಈ ಬಜೆಟ್ ಮೂಲಸೌಕರ್ಯ ಮತ್ತು ರಸ್ತೆಗಳಿಗೆ ಸಹಾಯ ಮಾಡುತ್ತದೆ. ಕೃಷಿ ವಲಯಕ್ಕೂ ಆದ್ಯತೆ ನೀಡಲಾಗಿದೆ. ಆದಾಯ ತೆರಿಗೆ ಸುಧಾರಣೆಯು ಮಧ್ಯಮ ವರ್ಗದ ಜನರಿಗೆ ಭಾರಿ ಪ್ರಯೋಜನವಾಗಲಿದೆ ಒಟ್ಟಾರೆ ಈ ಬಜೆಟ್ ಸಾರ್ವಜನಿಕ-ಖಾಸಗಿ ಸಹಭಾಗಿತ್ವವನ್ನು ಪ್ರೋತ್ಸಾಹಿಸಿದೆ ಎಂದಿದ್ದಾರೆ.