ಹೊಸದಿಗಂತ ಡಿಜಿಟಲ್ ಡೆಸ್ಕ್:
ನನ್ನನ್ನು ಒಬ್ಬ ಟೆರೆರಿಸ್ಟ್ ರೀತಿ ನಡೆಸಿಕೊಂಡರು. ಆದರೇ ಹೈಕೋರ್ಟ್ ನಿಂದ ನನ್ನನ್ನು ಬಿಡುಗಡೆ ಮಾಡುವಂತೆ ಆದೇಶಿಸಿದೆ. ಇದು ಸತ್ಯಕ್ಕೆ ಸಿಕ್ಕ ಜಯವಾಗಿದೆ ಎಂಬುದಾಗಿ ಬಿಜೆಪಿ ಎಂಎಲ್ಸಿ ಸಿ.ಟಿ ರವಿ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ.
ಬಿಡುಗಡೆಗೆ ಆದೇಶದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ನನ್ನ ಒಬ್ಬ ಟೆರರಿಸ್ಟ್ ರೀತಿ ನಡೆಸಿಕೊಂಡರು. ರಾಜಕೀಯ, ಸೈದಾಂತಿಕವಾಗಿ ಟೀಕೆ ಮಾಡುತ್ತೇನೆಯೇ ಹೊರತು, ನಾನು ವೈಯಕ್ತಿಕವಾಗಿ ಎಂದೂ ಟೀಕೆ ಮಾಡಲ್ಲ ಎಂದರು.
ನನ್ನ ಬಗ್ಗೆ ಚಿಕ್ಕಮಗಳೂರಿನಲ್ಲಿ ಕೇಳಿ ತಿಳಿದುಕೊಳ್ಳಿ, ಡಿ.ಕೆ ಶಿವಕುಮಾರ್ ಬಗ್ಗೆ ರಾಮನಗರದಲ್ಲಿ ಕೇಳಿ ತಿಳಿದುಕೊಳ್ಳಿ. ಇಂದು ಸತ್ಯಕ್ಕೆ ಜಯ ಸಿಕ್ಕಿದೆ ಎಂಬುದಾಗಿತಿಳಿಸಿದರು.