ಇದು ಎಲಾನ್ ಮಸ್ಕ್ ಬಿಸಿನೆಸ್ ಮೈಂಡ್: ‘X’ನ್ನು xAI startupಗೆ ಮಾರಾಟ!

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಎಲಾನ್ ಮಸ್ಕ್ ತಮ್ಮ ಕೃತಕ ಬುದ್ಧಿಮತ್ತೆಯ ಸ್ಟಾರ್ಟ್ಅಪ್ xAI ಗೆ ತಮ್ಮ ಸಾಮಾಜಿಕ ಜಾಲತಾಣ ವೇದಿಕೆ Xನ್ನು ಮಾರಾಟ ಮಾಡಿರುವುದಾಗಿ ತಿಳಿಸಿದ್ದಾರೆ.

ಈ ಹಿಂದೆ ಟ್ವಿಟರ್ ಹೆಸರಿನಲ್ಲಿದ್ದ ಈ ಸೋಶಿಯಲ್ ಮೀಡಿಯಾವನ್ನು ಎಲಾನ್ ಮಸ್ಕ್ 2022ರ ಎಪ್ರಿಲ್ ತಿಂಗಳಲ್ಲಿ ಖರೀದಿಸಿದ್ದರು. ಬರೋಬ್ಬರಿ 44 ಬಿಲಿಯನ್ ಅಮೆರಿಕನ್ ಡಾಲರ್ ಅಂದರೆ 3.40 ಲಕ್ಷ ಕೋಟಿ ರೂಪಾಯಿಗೆ ಖರೀದಿಸಿದ್ದರು. ಬಳಿಕ ಟ್ವಿಟರ್ ಸೋಶಿಯಲ್ ಮೀಡಿಯಾವನ್ನು ಎಕ್ಸ್ ಆಗಿ ಬದಲಿಸಿದ್ದರು.

ಆದರೆ ಇದೀಗ ಎಲಾನ್ ಮಸ್ಕ್ ತಮ್ಮ ಎಕ್ಸ್ ಸೋಶಿಯಲ್ ಮೀಡಿಯಾವನ್ನು 33 ಬಿಲಿಯನ್ ಅಮೆರಿಕನ್ ಡಾಲರ್‌ಗೆ ಮಾರಾಟ ಮಾಡಿದ್ದಾರೆ.

ಆದರೆ ಎಲಾನ್ ಮಸ್ಕ್ ತಮ್ಮ ಎಕ್ಸ್ ಸೋಶಿಯಲ್ ಮೀಡಿಯಾ ಸಂಸ್ಥೆಯನ್ನು ಮಾರಾಟ ಮಾಡಿದ್ದು ತಮ್ಮದೇ ಮತ್ತೊಂದು ಸಂಸ್ಥೆಯಾಗಿರುವ xAI ಸಂಸ್ಥೆಗೆ. 2023ರಲ್ಲಿ ಆರ್ಟಿಫೀಶಿಯಲ್ ಇಂಟಲಿಜೆನ್ಸ್ ಆಧಾರಿತ xAI ಸಂಸ್ಥೆಯನ್ನು ಎಲಾನ್ ಮಸ್ಕ್ ಆರಂಭಿಸಿದ್ದಾರೆ. ಇದೀಗ ಈ ಸಂಸ್ಥೆಗೆ ಎಕ್ಸ್ ಸೋಶಿಯಲ್ ಮೀಡಿಯಾ ಸಂಸ್ಥೆಯನ್ನು ಮಾರಾಟ ಮಾಡಿದ್ದಾರೆ.

600 ಮಿಲಿಯನ್‌ಗೂ ಅಧಿಕ ಬಳಕೆದಾರರನ್ನು ಹೊಂದಿರುವ ಎಕ್ಸ್ ಇದೀಗ xAI ಭಾಗವಾಗಿದೆ. ಇತ್ತೀಚೆಗೆ ಎಲಾನ್ ಮಸ್ಕ್ ಎಕ್ಸ್ ಸೋಶಿಯಲ್ ಮೀಡಿಯಾದಲ್ಲಿ ಆರ್ಟಿಫೀಶಿಯಲ್ ಇಂಟಲಿಜನ್ಸ್ ಪ್ರಾಮುಖ್ಯತೆ ಕುರಿತು ಮಾತನಾಡಿದ್ದರು. ಇದಾದ ಕೆಲವೇ ದಿನದಲ್ಲಿ ಇದೀಗ ಎಕ್ಸ್ ಸೋಶಿಯಲ್ ಮೀಡಿಯಾ xAI ಭಾಗವಾಗಿದೆ. ಇದೀಗ ಅಧಿಕೃತವಾಗಿ ಎಕ್ಸ್, xAI ಭಾಗವಾಗಿದೆ. ಡೇಟಾ ಹಂಚಿಕೆ ಸೇರಿದಂತೆ ಎಲ್ಲಾ ಪಾಲುದಾರಿಕೆಯನ್ನು xAI ಖರೀದಿಸಿದೆ.

ಈ ಕುರಿತು ಎಲಾನ್ ಮಸ್ಕ್ ಪೋಸ್ಟ್ ಮಾಡಿದ್ದಾರೆ. ವಿಶೇಷವಾಗಿ ತಮ್ಮ ಎಕ್ಸ್ ಖರೀದಿ ಹಾಗೂ ಮಾರಾಟದಲ್ಲಿ 12 ಬಿಲಿಯನ್ ಅಮೆರಿಕನ್ ಡಾಲರ್ ಸಾಲ ಎಂದು ಉಲ್ಲೇಖಿಸಿದ್ದಾರೆ. ಈ ವಿಲೀನ xAI ಸಂಸ್ಥೆಯನ್ನು 80 ಬಿಲಿಯನ್ ಡಾಲರ್ ಮತ್ತು X ಸಂಸ್ಥೆಯನ್ನು 33 ಬಿಲಿಯನ್ ಡಾಲರ್ (45 ಬಿಲಿಯನ್ ಡಾಲರ್ ಮೈನಸ್ 12 ಬಿಲಿಯನ್ ಡಾಲರ್ ಸಾಲ) ಎಂದು ಅಂದಾಜಿಸಿದೆ. xAI ಮತ್ತು X ನ ಭವಿಷ್ಯವು ಒಂದಕ್ಕೊಂದು ಬೆಸೆದುಕೊಂಡಿದೆ. ಇಂದು ನಾವು ಡೇಟಾ, ಮಾದರಿಗಳು, ಕಂಪ್ಯೂಟೇಶನ್, ವಿತರಣೆ ಮತ್ತು ಪ್ರತಿಭೆಗಳನ್ನು ಸಂಯೋಜಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸುತ್ತೇವೆ ಎಂದಟ್ವೀಟ್ ಮಾಡಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!