ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಗಂಗೂಬಾಯಿ ಕಾಥಿಯಾವಾಡಿ ಇಂದು ರಿಲೀಸ್ ಆಗಿದೆ.
ಬಾಲಿವುಡ್ ಸೆಲೆಬ್ರಿಟಿಗಳಿಗಾಗಿ ಪ್ರಿಮಿಯರ್ ಶೋ ಆಯೋಜಿಸಿದ್ದು, ಸಾಕಷ್ಟು ಸಿನಿ ಗಣ್ಯರು ಸಿನಿಮಾ ನೋಡಿ ಭೇಷ್ ಎಂದಿದ್ದಾರೆ.
ನಟ ರಿತೇಶ್ ದೇಶ್‌ಮುಖ್ ಕೂಡ ಪ್ರಿಮಿಯರ್‌ನಲ್ಲಿ ಸಿನಿಮಾ ನೋಡಿದ್ದು, ಇದು ಸಿನಿಮಾ ಅಲ್ಲ ಸಂಪೂರ್ಣ ಮ್ಯಾಜಿಕ್ ಎಂದು ಹೇಳಿದ್ದಾರೆ.
ಸಿನಿಮಾ ನೋಡಿದೆ ಎನಿಸಲೇ ಇಲ್ಲ, ಒಂಥರಾ ಮ್ಯಾಜಿಕಲ್ ಎಕ್ಸ್‌ಪೀರಿಯನ್ಸ್ ನನಗಾಯ್ತು. ಸಂಜಯ್ ಲೀಲಾ ಬನ್ಸಾಲಿ ಕಥೆ ಹೇಳುವ ಶೈಲಿ ಯಾರಿಗೂ ಬರುವುದಿಲ್ಲ. ಪ್ರತಿ ಫ್ರೇಮ್ ಕೂಡ ಪರ್ಫೆಕ್ಟ್. ಆಲಿಯಾ ಕೂಡ ಇದಕ್ಕೆ ಸಾಥ್ ನೀಡಿದ್ದಾರೆ, ಆಲಿಯಾ ನಟನೆ ಗೋಲ್ಡ್. ನೀವು ಒಳ್ಳೆ ಆಕ್ಟರ್ ಎಂದು ಗೊತ್ತಿತ್ತು. ಆದರೆ ನಿಮ್ಮನ್ನು ನೀವು ಗಂಗೂಬಾಯಿಯಂತೆ ತೋರಿಸಿಕೊಂಡ ರೀತಿಗೆ ನಾನು ಫಿದಾ ಎಂದಿದ್ದಾರೆ.