ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯ ರಾಜಕಾರಣದ ಚುಕ್ಕಾಣಿ ಹಿಡಿಯಲು ಸಕಲ ತಯಾರಿ ಮಾಡಿಕೊಂಡಿರುವ ಕಾಂಗ್ರೆಸ್ ಗೆಲುವಿನ ಖುಷಿಯಲ್ಲಿ ಬೀಗುತ್ತಿದೆ.
ಜನರು ಬದಲಾವಣೆ ಬಯಸಿದ್ದಾರೆ, ಭ್ರಷ್ಟಾಚಾರದ ಸರ್ಕಾರದಿಂದ ಜನರು ಬೇಸತ್ತು ನಮ್ಮನ್ನು ಆಯ್ಕೆ ಮಾಡಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಮುಂಚೆಯೇ ನಾವು ಹೇಳಿದ್ವಿ, ಗೆಲುವು ನಮ್ಮದೇ ಅಂತ, ಸಮೀಕ್ಷೆಗಳು ಕೂಡ ಅದನ್ನೇ ಹೇಳಿತ್ತು. ನೋಡಿ ಹಾಗೆಯೇ ಆಗುತ್ತಿದೆ ಎಂದಿದ್ದಾರೆ.
ರಾಜ್ಯಕ್ಕೆ ಪ್ರಧಾನಿ ಮೋದಿ, ಅಮಿತ್ ಶಾ ಅವರು ಎಷ್ಟು ಬಾರಿ ಬಂದು ಹೋಗಿದ್ದಾರೆ, ಆದರೆ ಏನೂ ಪ್ರಯೋಜನ ಇಲ್ಲ, ಏಕೆಂದರೆ ಜನರಿಗೆ ಬಿಜೆಪಿಯೇ ಬೇಸರ ತರಿಸಿದೆ ಎಂದಿದ್ದಾರೆ.