ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶ ಸುತ್ತಿ ನೋಡು ಕೋಶ ಓದಿ ನೋಡು ಅಂತ ಹೇಳ್ತಾರೆ. ನೀವು ಕೂಡ ಪುಸ್ತಕ ಓದುವ ಹವ್ಯಾಸಿಗಳಾಗಿದ್ದರೆ ನೀವು ವಿಧಾನಸೌಧಕ್ಕೆ ಹೋಗ್ಲೇಬೇಕು.
ವಿಧಾನಸಭೆ ಸಚಿವಾಲಯವು ಇದೇ ಮೊದಲ ಬಾರಿಗೆ ಫೆಬ್ರವರಿ 27ರಿಂದ ಮಾರ್ಚ್ 3ರ ತನಕ ವಿಧಾನಸೌಧದ ಆವರಣದಲ್ಲಿ ಐದು ದಿನಗಳ ಪುಸ್ತಕ ಮೇಳ ಹಮ್ಮಿಕೊಂಡಿದೆ.
ಇಂದು ಸಂಜೆ 4 ಗಂಟೆಗೆ ಈ ಕಾರ್ಯಕ್ರಮವನ್ನು ಸಿಎಂ ಸಿದ್ದರಾಮಯ್ಯ ಉದ್ಘಾಟಿಸುವರು. ನಾಳೆಯಿಂದ ಬೆಳಗ್ಗೆ 10 ಗಂಟೆಯಿಂದ ರಾತ್ರಿ 8 ಗಂಟೆ ತನಕ ಮುಂದಿನ ಐದು ದಿನಗಳ ಕಾಲ ಪುಸ್ತಕ ಮೇಳ ನಡೆಯಲಿದೆ. ಇಲ್ಲಿ ಕವಿಗೋಷ್ಠಿ, ಪುಸ್ತಕ ಬಿಡುಗಡೆ, ಪುಸ್ತಕ ಪ್ರದರ್ಶನ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.
ವಿವಿಧ ಪ್ರಕಾಶನ ಸಂಸ್ಥೆಗಳ ಮಳಿಗೆಗಳ ಜೊತೆಗೆ ಕನ್ನಡ ಪುಸ್ತಕ ಪ್ರಾಧಿಕಾರ ಹಾಗೂ ಅಕಾಡೆಮಿಗಳಿಂದ ಸಂಬಂಧಿಸಿದ 150 ಕ್ಕೂ ಹೆಚ್ಚು ಮಳಿಗೆಗಳು ಇರಲಿವೆ.
ಫೆಬ್ರವರಿ 28 ರಿಂದ ಮಾರ್ಚ್ 2ರವರೆಗೆ ಪುಸ್ತಕ ಮೇಳಕ್ಕೆ ಸಾರ್ವಜನಿಕರಿಗೆ ಉಚಿತ ಪ್ರವೇಶ ಇರಲಿದ್ದು, ಮಾರ್ಚ್ 31 ರಾಜ್ಯಪಾಲ ಥಾವರ್ ಚಂದ್ ಗೆಹಲೋಟ್ ಪುಸ್ತಕ ಮೇಳವನ್ನು ವೀಕ್ಷಿಸಲಿದ್ದಾರೆ.