ಹೊಸದಿಗಂತ ಡಿಜಿಟಲ್ ಡೆಸ್ಕ್:
ದೆಹಲಿಯ ಕರ್ತವ್ಯಪಥದಲ್ಲಿ ಇದೇ ಮೊದಲ ಬಾರಿಗೆ ಗಣರಾಜ್ಯೋತ್ಸವ ಪರೇಡ್‌ನಲ್ಲಿ 3 ಸೇನಾಪಡೆಗಳ ಜಂಟಿ ಸ್ತಬ್ಧಚಿತ್ರವನ್ನು ಪ್ರದರ್ಶನ ಮಾಡಲಾಗಿದೆ.
ಭೂಸೇನೆ, ನೌಕಾಪಡೆ ಮತ್ತು ವಾಯುಪಡೆಗಳು ಒಟ್ಟಾಗಿ ಕಾರ್ಯನಿರ್ವಹಿಸುವ ಥೀಮ್‌ನ್ನು ಈ ಜಂಟಿ ಸ್ತಬ್ಧಚಿತ್ರ ಒಳಗೊಂಡಿತ್ತು. ಜಂಟಿ ಆಪರೇಷನ್ ಕೊಠಡಿ, ಅರ್ಜುನ್ ಟ್ಯಾಂಕರ್, ತೇಜಸ್, ಐಎನ್‌ಎಸ್ ವಿಶಾಖಪಟ್ಟಣ ನೌಕೆ ಮಾದರಿಯನ್ನು ಹೊಂದಿದೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಸಾರ್ವಜನಿಕರನ್ನು ಹೆಚ್ಚಿನ ಪ್ರಮಾಣದಲ್ಲಿ ಆಹ್ವಾನಿಸುತ್ತಿದೆ. ಈ ಬಾರಿಯಂತೂ 10,000 ಮಂದಿಯನ್ನು ಆಹ್ವಾನಿಸಿದ್ದು, ಈ ಬಾರಿಯ ಕಾರ್ಯಕ್ರಮವನ್ನು ಜನಭಾಗೀದಾರಿ ಎಂದು ಕರೆದಿದೆ.